ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಹಾದಿಗೆ ಮರಳುವ ಒತ್ತಡದಲ್ಲಿ ರಾಜಸ್ಥಾನ್

ಪ್ಲೇ ಆಫ್‌ ಹಾದಿಯಿಂದ ಹೊರಬಿದ್ದಿರುವ ಸನ್‌ರೈಸರ್ಸ್; ಸಂಜು ಬಳಗಕ್ಕೆ ಬ್ಯಾಟಿಂಗ್ ಚಿಂತೆ
Last Updated 26 ಸೆಪ್ಟೆಂಬರ್ 2021, 17:30 IST
ಅಕ್ಷರ ಗಾತ್ರ

ದುಬೈ: ಪ್ಲೇ ಆಫ್‌ ಪ್ರವೇಶದ ಅವಕಾಶ ಜೀವಂತವಾಗಿ ಇರಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸುವುದು ಮಹತ್ವದ್ದಾಗಲಿದೆ.

ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ರಾಜಸ್ಥಾನ್ ಎದುರಸಿಲಿದೆ. ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಬ್ಯಾಟ್ಸ್‌ಮನ್‌ಗಳ ಪೂರ್ಣ ಬೆಂಬಲ ಸಿಕ್ಕರೆ ತಂಡವು ಗೆಲುವಿನ ಹಾದಿಗೆ ಮರಳಬಹುದು.

ಒಂಬತ್ತು ಪಂದ್ಯಗಳನ್ನು ಆಡಿರುವ ರಾಜಸ್ಥಾನ್ ತಂಡವು ಎಂಟು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಅದರಲ್ಲಿ ಕನಿಷ್ಠ ನಾಲ್ಕರಲ್ಲಿ ಗೆದ್ದರೂ ಅವಕಾಶ ಸಿಗುವ ಸಾಧ್ಯತೆ ಇದೆ. ಎರಡನೇ ಹಂತದಲ್ಲಿ ರಾಜಸ್ಥಾನ್ ತಂಡವು ಪಂಜಾಬ್ ಕಿಂಗ್ಸ್ ಎದುರು ಎರಡು ರನ್‌ಗಳಿಂದ ಗೆದ್ದಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 33 ರನ್‌ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಸಂಜು 70 ರನ್‌ ಗಳಿಸಿದ್ದರು. ಆದರೆ, ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದು ತಂಡದ ಸೋಲಿಗೆ ಕಾರಣವಾಯಿತು.

ಯುವ ಆಟಗಾರ ಯಶಸ್ವಿ ಜೈಸ್ವಾಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್ ತಮಗೆ ಸಿಕ್ಕ ಅವಕಾಶಗಳಲ್ಲಿ ಸಾಮರ್ಥ್ಯ ಸಾಬೀತು ಮಾಡಿಲ್ಲ. ಬೌಲಿಂಗ್ ವಿಭಾಗದ ಕಾರ್ಯದಕ್ಷತೆ ಉತ್ತಮವಾಗಿದೆ. ಮುಸ್ತಫಿಜುರ್ ರೆಹಮಾನ್, ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕಾರಿಯಾ ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಂಡಿದ್ದಾರೆ.

ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿರುವ ಸನ್‌ರೈಸರ್ಸ್ ತಂಡಕ್ಕೆ ಯಾವುದೇ ಒತ್ತಡವಿಲ್ಲ. ಆದರೆ, ರಾಜಸ್ಥಾನ್ ಗೆಲುವಿನ ಆಸೆಗೆ ತಣ್ಣೀರೆರಚಿ, ಹಾದಿ ತಪ್ಪಿಸುವ ಕೆಲಸ ಮಾಡುವ ಸಾಧ್ಯತೆ ಇದೆ. ಸನ್‌ರೈಸರ್ಸ್‌ ಇದುವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಗೆದ್ದಿರುವುದು ಒಂದರಲ್ಲಿ ಮಾತ್ರ. ಉತ್ತಮ ಆಟಗಾರರಿದ್ದರೂ ತಂಡವಾಗಿ ಆಡುವಲ್ಲಿ ಬಳಗ ವಿಫಲವಾಗಿದೆ. ಸಮಾಧಾನಕರ ಗೆಲುವಿಗಾಗಿ ಇನ್ನುಳಿದಿರುವ ಪಂದ್ಯಗಳಲ್ಲಿ ಗೆಲ್ಲುವ ಛಲ ತೋರಿದರೆ ಸಂಜು ಸ್ಯಾಮ್ಸನ್‌ ಬಳಗಕ್ಕೆ ಕಠಿಣವಾಗಬಹುದು. ರಾಯಲ್ಸ್ ತಂಡವು ಮೊದಲ ಸುತ್ತಿನಲ್ಲಿ ಕೇನ್ ವಿಲಿಯಮ್ಸನ್ ಬಳಗದ ವಿರುದ್ಧ ಜಯಿಸಿತ್ತು.

ತಂಡಗಳು: ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೂಯಿಸ್, ಡೇವಿಡ್‌ ಮಿಲ್ಲರ್, ಕ್ರಿಸ್ ಮೊರಿಸ್, ಒಷೇನ್ ಥಾಮಸ್, ಮುಸ್ತಫಿಜುರ್ ರೆಹಮಾನ್, ತಬ್ರೇಜ್ ಶಮ್ಸಿ, ಚೇತನ್ ಸಕಾರಿಯಾ, ರಿಯಾನ್ ಪರಾಗ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಅನುಜಾ ರಾವತ್ ಶಿವಂ ದುಬೆ, ಮಹಿಪಾಲ್ ಲೊಮ್ರೊರ್, ಕುಲದೀಪ್ ಯಾದವ್.

ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ, ಶ್ರೀವತ್ಸ ಗೋಸ್ವಾಮಿ, ರಶೀದ್ ಖಾನ್, ವಿಜಯಶಂಕರ್, ಮೊಹಮ್ಮದ್ ನಬಿ, ಜೇಸನ್ ರಾಯ್, ಮುಜೀಬ್ ಉರ್ ರೆಹಮಾನ್, ಜೆ. ಸುಚಿತ್, ಜೇಸನ್ ಹೋಲ್ಡರ್, ವಿರಾಟ್ ಸಿಂಗ್, ಪ್ರಿಯಂ ಗಾರ್ಗ್, ಖಲೀಲ್ ಅಹಮದ್, ಬಾಸಿಲ್ ತಂಪಿ, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್.

ಬಲಾಬಲ

ಪಂದ್ಯಗಳು: 14

ರಾಯಲ್ಸ್ ಜಯ; 7

ಸನ್‌ರೈಸರ್ಸ್‌ ಜಯ; 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT