ಗುರುವಾರ , ಏಪ್ರಿಲ್ 2, 2020
19 °C

ಕೊರೊನಾ ವಿರುದ್ಧ ಹೋರಾಟ ‘ಟೆಸ್ಟ್‌’ ಇದ್ದಂತೆ: ಸಚಿನ್ ತೆಂಡೂಲ್ಕರ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್ ಎದುರಿನ ಹೋರಾಟವು ಟೆಸ್ಟ್ ಕ್ರಿಕೆಟ್ ಪಂದ್ಯವಿದ್ದಂತೆ ಎಂದು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

‘ಇಡೀ ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಟೆಸ್ಟ್‌ ಪಂದ್ಯದಲ್ಲಿ ರಕ್ಷಣಾತ್ಮಕವಾಗಿ ಆಡುತ್ತ, ತಂಡವು ಒಗ್ಗೂಡಿ ಹೋರಾಡುವ ಮಾದರಿಯಲ್ಲಿ ಈ ಕಾರ್ಯ ನಡೆಯಬೇಕಿದೆ. ಕ್ರಿಕೆಟ್‌ನ ಅತ್ಯಂತ ಹಳೆಯ ಮಾದರಿಯಾದ ಟೆಸ್ಟ್ ಕ್ರಿಕೆಟ್‌ನ ಪಾಠಗಳು ನಮಗೆ ನೆರವಾಗಲಿವೆ’ ಎಂದು ಸಚಿನ್ ಆಂಗ್ಲಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಪಿಚ್ ಮರ್ಮ ತಿಳಿಯದೇ ಹೋದಾಗ, ಎದುರಾಳಿಯ ದಾಳಿಯು ಪ್ರಭಾವಶಾಲಿಯಾಗಿರುವಾಗ ರಕ್ಷಣಾತ್ಮಕ ಶೈಲಿಯೇ ಶ್ರೇಷ್ಠ ಆಕ್ರಮಣಕಾರಿ ಶೈಲಿಯೂ ಆಗುತ್ತದೆ.  ಆದ್ದರಿಂದ ತಾಳ್ಮೆ, ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಎದುರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು