ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷಗಳ ಹಿಂದೆ | ಶತಕಗಳ ಸರದಾರ ಸಚಿನ್ ಮೊದಲ ಸಲ ಮೂರಂಕಿ ದಾಟಿದ್ದು ಇದೇ ದಿನ

Last Updated 14 ಆಗಸ್ಟ್ 2020, 13:34 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌‌, ಮೊದಲ ಶತಕ ಗಳಿಸಿ ಇವತ್ತಿಗೆ ಬರೋಬ್ಬರಿ 30 ವರ್ಷ ತುಂಬಿತು. 1990ರ ಆಗಸ್ಟ್‌ 14ರಂದು ಇಂಗ್ಲೆಂಡ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ತಮ್ಮ ಎಂಟನೇ ಟೆಸ್ಟ್‌ ಪಂದ್ಯದಲ್ಲಿ ಮೂರಂಕಿ ಮುಟ್ಟಿದ್ದ ಸಚಿನ್‌ಗೆವಯಸ್ಸು ಆಗ ಕೇವಲ17 ವರ್ಷ, 112 ದಿನಗಳು. ತಮ್ಮ ಎಂಟನೇ ಟೆಸ್ಟ್‌ ಪಂದ್ಯದಲ್ಲಿ 189 ಎಸೆತಗಳಿಂದ ಅಜೇಯ 119 ರನ್‌ ಗಳಿಸಿದ್ದರ ಸಚಿನ್‌, ಭಾರತವು ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾಗಿದ್ದರು. ಮಾತ್ರವಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟ್ ಬುದಕಿನಮೊದಲ ಪಂದ್ಯ ಶ್ರೇಷ್ಠ ಗೌರವವನ್ನೂ ಗಳಿಸಿಕೊಂಡಿದ್ದರು.

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ನಾಯಕ ಗ್ರಾಹಂ ಗೂಚ್‌(116), ಮೈಕ್‌ ಅಥರ್‌ಟನ್‌ (131), ಮತ್ತು ರಾಬಿನ್‌ ಸ್ಮಿತ್‌ (ಅಜೇಯ 121) ಶತಕ ಗಳಿಸಿದ್ದರಿಂದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 519 ರನ್‌ ಕಲೆ ಹಾಕಿತ್ತು.

ಇದಕ್ಕುತ್ತರವಾಗಿ ಭಾರತ 432 ರನ್‌ ಗಳಿಸಿತ್ತು. ನಾಯಕ ಮೊಹಮದ್‌ ಆಜರುದ್ದೀನ್‌ 179, ಸಂಜಯ್‌ ಮಂಜ್ರೇಕರ್‌ 93 ಮತ್ತು ಸಚಿನ್‌ 68 ರನ್ ಬಾರಿಸಿದ್ದರು.‌

87 ರನ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆಂಗ್ಲರು 4 ವಿಕೆಟ್‌ ನಷ್ಟಕ್ಕೆ 320 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದರು. 408 ರನ್‌ಗಳ ಗುರಿ ಬೆನ್ನತ್ತಿದ ಭಾರತ ಪರ ಆರಂಭಿಕ ನವಜೋತ್‌ ಸಿಧು (0) ಮತ್ತು ರವಿ ಶಾಸ್ತ್ರಿ (12) ಇಬ್ಬರೂ ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರು.

ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಸಂಜಯ್‌ ಮಂಜ್ರೇಕರ್ (32) ಮತ್ತು ದಿಲೀಪ್‌ ವೆಂಗ್‌ಸರ್ಕರ್ (50)‌‌‌ ಕ್ರಮಾಂಕದಲ್ಲಿ 74 ರನ್‌ ಜೊತೆಯಾಟವಾಡಿದ್ದರು. ಆದಾಗ್ಯೂ ಅಜರುದ್ಧೀನ್‌ ಪಡೆ 109 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಚಿನ್,‌ ನಾಯಕನ ಜೊತೆಗೂಡಿ ಐದನೇ ವಿಕೆಟ್‌ ಜೊತೆಯಾಟದಲ್ಲಿ 18 ರನ್‌, ಆರನೇ ವಿಕೆಟ್‌ಗೆಕಪಿಲ್‌ ದೇವ್‌ ಜೊತೆಗೆ 56ರನ್‌ ಗಳಿಸಿದರು. ಐದನೇ ದಿನದಾಟ ಮುಗಿಯುವವರೆಗೂ ಅಜೇಯವಾಗಿ ಉಳಿದ ಸಚಿನ್,‌‌ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಚಿನ್ ಶತಕ‌ ಸಾಧನೆ
ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ 18,426 ರನ್‌ ಗಳಿಸಿದ್ದು, 49 ಶತಕ ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ200 ಪಂದ್ಯಗಳ 15,921 ರನ್‌ ಕಲೆಹಾಕಿದ್ದು, 51 ಶತಕ ಸಿಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT