ಮಂಗಳವಾರ, ನವೆಂಬರ್ 29, 2022
29 °C

ಇರಾನಿ ಟ್ರೋಫಿ ಕ್ರಿಕೆಟ್: ಸೌರಭ್ ಆಲ್‌ರೌಂಡ್ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್ (ಪಿಟಿಐ): ಸರ್ಫರಾಜ್ ಖಾನ್ ಶತಕ ಹಾಗೂ ಸೌರಭ್ ಕುಮಾರ್ ಆಲ್‌ರೌಂಡ್ ಆಟದ ಬಲದಿಂದ ರೆಸ್ಟ್ ಆಫ್ ಇಂಡಿಯಾ ತಂಡವು ಇರಾನಿ ಟ್ರೋಫಿ ಕ್ರಿಕೆಟ್ ಫೈನಲ್‌ನಲ್ಲಿ ಸೌರಾಷ್ಟ್ರದ ಎದುರು ಉತ್ತಮ ಮುನ್ನಡೆ ಗಳಿಸಿತು. 

ಇಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ  ದಿನವಾದ ಭಾನುವಾರ ರೆಸ್ಟ್ ಆಫ್ ಇಂಡಿಯಾ ತಂಡವು 110 ಓವರ್‌ಗಳಲ್ಲಿ 374 ರನ್ ಗಳಿಸಿತು. ಸರ್ಫರಾಜ್ ಖಾನ್ (138) ಶತಕ ಹಾಗೂ ಸೌರಭ್ ಕುಮಾರ್ (55, 78ಎ, 4X10) ಅರ್ಧಶತಕ ಗಳಿಸಿದರು. ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದ ಸೌರಭ್ ಎರಡು ಓವರ್‌ನಲ್ಲಿ ಒಂದೂ ರನ್ ನೀಡದೇ ಎರಡು ವಿಕೆಟ್ ಗಳಿಸಿದರು. 

ಇದರಿಂದಾಗಿ ದಿನದಾಟದ ಕೊನೆಗೆ ಸೌರಾಷ್ಟ್ರ ತಂಡವು 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 49 ರನ್ ಗಳಿಸಿತು.  

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಸೌರಾಷ್ಟ್ರ: 98, ರೆಸ್ಟ್ ಆಫ್ ಇಂಡಿಯಾ: 110 ಓವರ್‌ಗಳಲ್ಲಿ 374 (ಸರ್ಫರಾಜ್ ಖಾನ್ 138, ಹನುಮವಿಹಾರಿ 82, ಸೌರಭ್ ಕುಮಾರ್ 55, ಜಯಂತ್ ಯಾದವ್ 37, ಚೇತನ್ ಸಕಾರಿಯಾ 93ಕ್ಕೆ5, ಚಿರಾಗ್ ಜಾನಿ 58ಕ್ಕೆ2, ಜಯದೇವ್ ಉನದ್ಕತ್ 100ಕ್ಕೆ2) ಎರಡನೇ ಇನಿಂಗ್ಸ್; ಸೌರಾಷ್ಟ್ರ: 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 49 (ಹಾರ್ವಿಕ್ ದೇಸಾಯಿ 20, ಸ್ನೆಲ್ ಪಟೇಲ್ 16, ಸೌರಭ್ ಕುಮಾರ್ ರನ್‌ ನೀಡದೇ 2 ವಿಕೆಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು