ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಒಮಾನ್‌ ವಿರುದ್ಧ ಸ್ಕಾಟ್ಲೆಂಡ್‌ಗೆ ಸುಲಭ ಜಯ

ಸೂಪರ್‌ 8 ಹಂತದ ಹಾದಿಯನ್ನು ಸುಗಮ
Published 10 ಜೂನ್ 2024, 16:37 IST
Last Updated 10 ಜೂನ್ 2024, 16:37 IST
ಅಕ್ಷರ ಗಾತ್ರ

ಆ್ಯಂಟಿಗಾ: ಬ್ರಾಂಡನ್ ಮೆಕ್‌ಮುಲ್ಲೆನ್ (ಔಟಾಗದೇ 61; 31ಎಸೆತ, 4x9, 6x2) ಅವರ ಅರ್ಧಶತಕದ ನೆರವಿನಿಂದ ಸ್ಕಾಟ್ಲೆಂಡ್‌ ತಂಡವು ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಒಮಾನ್‌ ತಂಡವನ್ನು ಮಣಿಸಿತು.

ಈ ಗೆಲುವಿನೊಂದಿಗೆ ಸ್ಕಾಟ್ಲೆಂಡ್‌ ತಂಡವು ‘ಬಿ’ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು. ಮಾತ್ರವಲ್ಲದೆ, ಸೂಪರ್‌ 8 ಹಂತದ ಹಾದಿಯನ್ನು ಸುಗಮಗೊಳಿಸಿದೆ. 

ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಒಮಾನ್‌ ತಂಡವು ಪ್ರತೀಕ್ ಆಠವಳೆ (54; 40ಎ, 4x5, 6x2) ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 150 ರನ್‌ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಅಯಾನ್ ಖಾನ್ (ಔಟಾಗದೆ 41) ಉಪಯುಕ್ತ ಕಾಣಿಕೆ ನೀಡಿದರು.

ಸ್ಕಾಟ್ಲೆಂಡ್‌ ತಂಡವು 13.1 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 153 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಬ್ರಾಂಡನ್ ಮತ್ತು ಜಾರ್ಜ್ ಮುನ್ಸಿ (41; 20ಎ, 4x2, 6x4) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸ್ಕಾಟ್ಲೆಂಡ್‌ ಗೆದ್ದಿದೆ. ಮತ್ತೊಂದು ಪಂದ್ಯ (ಇಂಗ್ಲೆಂಡ್ ವಿರುದ್ಧ) ಮಳೆಯಿಂದ ರದ್ದಾಗಿದೆ. ಹೀಗಾಗಿ, 5 ಅಂಕದೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಆಸ್ಟ್ರೇಲಿಯಾ (4 ಅಂಕ) ಎರಡನೇ ಸ್ಥಾನದಲ್ಲಿದೆ. ನಮೀಬಿಯಾ ಮತ್ತು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಸಂಕ್ಷಿಪ್ತ ಸ್ಕೋರ್‌

ಒಮಾನ್‌: 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 150 (ಪ್ರತೀಕ್‌ ಅಠವಳೆ 54, ಅಯಾನ್‌ ಖಾನ್‌ ಔಟಾಗದೇ 41; ಸಫ್ಯಾನ್ ಷರೀಫ್ 40ಕ್ಕೆ 2). ಸ್ಕಾಟ್ಲೆಂಡ್‌: 13.1 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 153 (ಜಾರ್ಜ್ ಮುನ್ಸಿ 41, ಬ್ರಾಂಡನ್ ಮೆಕ್‌ಮುಲ್ಲೆನ್ 61; ಬಿಲಾನ್‌ ಖಾನ್‌ 12ಕ್ಕೆ 1). ಪಂದ್ಯದ ಆಟಗಾರ: ಬ್ರಾಂಡನ್ ಮೆಕ್‌ಮುಲ್ಲೆನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT