ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಜ ಟ್ರೋಫಿ: ಫೈನಲ್‌ಗೆ ಬೆಂಗಳೂರು ಬ್ಲಾಸ್ಟರ್ಸ್

Published : 31 ಆಗಸ್ಟ್ 2024, 1:00 IST
Last Updated : 31 ಆಗಸ್ಟ್ 2024, 1:00 IST
ಫಾಲೋ ಮಾಡಿ
Comments

ಬೆಂಗಳೂರು: ಎಲ್‌.ಆರ್. ಚೇತನ್ ಮತ್ತು ಮಯಂಕ್ ಅಗರವಾಲ್ ಅವರ ಅಬ್ಬರದ ಜೊತೆಯಾಟದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು ತಂಡವು 9 ವಿಕೆಟ್‌ಗಳಿಂದ ಜಯಿಸಿತು. 

ಟಾಸ್ ಗೆದ್ದ ಬೆಂಗಳೂರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಗುಲ್ಬರ್ಗ ಮಿಸ್ಟಿಕ್ಸ್  ತಂಡವು 19.5 ಓವರ್‌ಗಳಲ್ಲಿ 155 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಬೆಂಗಳೂರು 17.1 ಓವರ್‌ಗಳಲ್ಲಿ 1 ವಿಕೆಟ್‌ಗೆ 159 ರನ್ ಗಳಿಸಿತು. 

ಆರಂಭಿಕ ಬ್ಯಾಟರ್ ಚೇತನ್ (ಔಟಾಗದೆ 89; 51ಎ, 4X9, 6X4) ಮತ್ತು ನಾಯಕ ಮಯಂಕ್ (52; 37ಎ, 4X6, 6X1) ಮೊದಲ ವಿಕೆಟ್ ಜೊತೆಯಾಟದಲ್ಲಿ 124 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಫೈನಲ್‌ನತ್ತ ಸಾಗಿತು. 

ಗುಲ್ಬರ್ಗ ತಂಡವು ಆರಂಭಿಕ ಬ್ಯಾಟರ್ ಲವನೀತ್ ಸಿಸೊಡಿಯಾ (41; 20ಎ) ಮತ್ತು ಪ್ರವೀಣ ದುಬೆ (26; 17ಎ) ಅವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲಿಲ್ಲ.

ಬೆಂಗಳೂರು ತಂಡದ ಲವೀಶ್, ಖಾನ್, ಕ್ರಾಂತಿಕುಮಾರ್ ಮತ್ತು ಶುಭಾಂಗ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಗುಲ್ಬರ್ಗ ತಂಡವು 81 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. 

ಸಂಕ್ಷಿಪ್ತ ಸ್ಕೋರು: ಗುಲ್ಬರ್ಗ ಮಿಸ್ಟಿಕ್ಸ್: 19.5 ಓವರ್‌ಗಳಲ್ಲಿ 155 (ಲವನೀತ್ ಸಿಸೊಡಿಯಾ 41, ಪ್ರವೀಣ ದುಬೆ 26, ದೇವದತ್ತ ಪಡಿಕ್ಕಲ್ 13, ಮೊಹಸೀನ್ ಖಾನ್ 25ಕ್ಕೆ2, ಲವೀಶ್ ಕೌಶಲ್ 25ಕ್ಕೆ2, ಕ್ರಾಂತಿಕುಮಾರ್ 22ಕ್ಕೆ2, ಶುಭಾಂಗ್ ಹೆಗಡೆ 23ಕ್ಕೆ2) 

ಬೆಂಗಳೂರು ಬ್ಲಾಸ್ಟರ್ಸ್: 17.1 ಓವರ್‌ಗಳಲ್ಲಿ 1 ವಿಕೆಟ್‌ಗೆ 159 (ಎಲ್‌.ಆರ್. ಚೇತನ್ ಔಟಾಗದೆ 89, ಮಯಂಕ್ ಅಗರವಾಲ್ 52, ಭುವನ್ ರಾಜು ಔಟಾಗದೆ 13, ರಿತೇಶ್ ಭಟ್ಕಳ್ 20ಕ್ಕೆ1) ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್‌ಗೆ 9 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಎಲ್‌.ಆರ್. ಚೇತನ್.

ಇಂದಿನ ಸೆಮಿಫೈನಲ್
ಮೈಸೂರು ವಾರಿಯರ್ಸ್–ಹುಬ್ಬಳ್ಳಿ ಟೈಗರ್ಸ್

ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT