ಕೋಲ್ಕತ್ತ: ಕೆರಿಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫ್ರಾಂಚೈಸ್, ಬಾಲಿವುಡ್ ನಟ ಶಾರೂಕ್ ಖಾನ್ ಒಡೆತನದ ಟ್ರಿನ್‌ಬ್ಯಾಗೊ ನೈಟ್ ರೈಡರ್ಸ್ (ಟಿಕೆಆರ್), ಕೋವಿಡ್–19 ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದೆ. ಟ್ರಿನಿಡಾಡ್ ಆ್ಯಂಡ್ ಟೊಬ್ಯಾಗೊದಲ್ಲಿ, ಲಾಕ್‌ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿರುವವರಿಗೆ 1000 ಆಹಾರ ಪೊಟ್ಟಣಗಳನ್ನು ವಿತರಿಸುವುದಾಗಿ ಶುಕ್ರವಾರ ತಿಳಿಸಿದೆ.

ತಂಡದ ಆಟಗಾರರಾದ ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ, ಡರೆನ್ ಬ್ರಾವೊ, ಲೆಂಡ್ಲ್ ಸಿಮನ್ಸ್ ಹಾಗೂ ಸುನಿಲ್ ನಾರಾಯಣ್ ಅವರು ನೆರವು ಸಿಬ್ಬಂದಿ ಜೊತೆಗೂಡಿ ಆಹಾರ ವಿತರಣೆ ಮಾಡಲಿದ್ದಾರೆ.

‘ಟಿಕೆ ರೈಡರ್ಸ್ ತಂಡವು ಹ್ಯಾಡ್ಕೊ ಲಿಮಿಟೆಡ್ ಜೊತೆಗೂಡಿ ಊಟದ ಪೊಟ್ಟಣಗಳನ್ನು ವಿತರಿಸಲಿದೆ. ಈ ಕಾರ್ಯಕ್ಕೆ ನೆರವಾಗುತ್ತಿರುವ ಆಟಗಾರರ ಕುರಿತು ಹೆಮ್ಮೆ ಎನಿಸುತ್ತಿದೆ’ ಎಂದು ನಟ ಶಾರೂಕ್ ಖಾನ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.