ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್

Published 9 ಜನವರಿ 2024, 16:01 IST
Last Updated 9 ಜನವರಿ 2024, 16:01 IST
ಅಕ್ಷರ ಗಾತ್ರ

ಮುಂಬೈ: ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವ ಮುಂಬೈ ಕ್ರಿಕೆಟ್ ತಂಡಕ್ಕೆ ಅನುಭವಿ ಆಟಗಾರ ಶ್ರೇಯಸ್ ಅಯ್ಯರ್ ಮರಳಿದ್ದಾರೆ.

ಇದೇ 12 ರಿಂದ 15ರವರೆಗೆ ಮುಂಬೈ ತಂಡವು ಆಂಧ್ರ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಶ್ರೇಯಸ್ ತವರಿಗೆ ಮರಳಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಅವರು ದೀರ್ಘ ಮಾದರಿಯ ಕ್ರಿಕೆಟ್ ಪೂರ್ವಾಭ್ಯಾಸಕ್ಕೆ ಒತ್ತು ನೀಡಲಿದ್ದಾರೆ. ಆದ್ದರಿಂದ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ.

ಪ್ರಸಕ್ತ ದೇಶಿ ಟೂರ್ನಿಯಲ್ಲಿ ಮುಂಬೈ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಿಹಾರ ವಿರುದ್ಧ ಜಯಿಸಿತ್ತು.

ತಂಡ: ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಜೈ ಬಿಸ್ತಾ, ಭೂಪೇನ್ ಲಾಲ್ವಾನಿ, ಅಮೋಘ ಭಟ್ಕಳ, ಸುವೇದ್ ಪಾರ್ಕರ್, ಪ್ರಸಾದ್ ಪವಾರ್, ಹಾರ್ದಿಕ್ ತಮೊರೆ (ಇಬ್ಬರೂ ವಿಕೆಟ್‌ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಥರ್ವ ಅಂಕೋಲೆಕರ್, ಮೋಹಿತ್ ಅವಸ್ತಿ, ಧವಳ್ ಕುಲಕರ್ಣಿ, ರಾಯಸ್ಟನ್ ದಿಯಾಸ್, ಸಿಲ್ವೆಸ್ಟರ್ ಡಿಸೋಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT