ಮುಂಬೈ: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ ಶುಭಮನ್ ಗಿಲ್ ಹಾಗೂ ಬಾಲಿವುಡ್ ನಟಿ ಸಾರಾ ಅಲಿಖಾನ್ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಉಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ಈಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.
ಈ ಸಾರಿಯ ಐಪಿಎಲ್‌ನ ಸ್ಟಾರ್ ಆಟಗಾರ ಶುಭಮನ್ ಹಾಗೂ ಸಾರಾ ಅಲಿಖಾನ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಪರಸ್ಪರ Unfollow ಮಾಡಿಕೊಂಡಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದಕ್ಕೆ ಕಾರಣಗಳು ತಿಳಿದು ಬಂದಿಲ್ಲ.
ಈ ಮೂಲಕ ಶುಭಮನ್ ಮತ್ತು ಸಾರಾ ನಡುವೆ ಬ್ರೇಕ್ ಅಫ್ ಆಗಿದೆ ಎಂಬ ವದಂತಿ ಎದ್ದಿದೆ.
ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶುಭಮನ್ ಗಿಲ್, ಸತತ ಎರಡನೇ ಬಾರಿಗೆ ಶತಕ ಸಿಡಿಸಿ ಫುಲ್ ಫಾರ್ಮ್‌ನಲ್ಲಿದ್ದಾರೆ. ಅತಿ ಹೆಚ್ಚು ರನ್ (851) ಗಳಿಸಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ.
ಈ ಹಿಂದೆ ಶುಭ್‌ಮನ್ ಹೆಸರು ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಜೊತೆ ತಳಕು ಹಾಕಿಕೊಂಡಿತ್ತು. ಆ ನಂತರ ಇಬ್ಬರೂ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಪಂಜಾಬ್ ಮೂಲದ ಶುಭಮನ್ ಗಿಲ್ ಗೆ ಸದ್ಯ 23 ವರ್ಷ ವಯಸ್ಸಾಗಿದ್ದು, ಸಾರಾ ಅಲಿಖಾನ್‌ಗೆ 27 ವರ್ಷ. ಸಾರಾ ತೆಂಡೂಲ್ಕರ್‌ಗೆ 24 ವರ್ಷ.
ಸಾರಾ ಅಲಿಖಾನ್ ಹಾಗೂ ನಟ ವಿಕ್ಕಿ ಕೌಶಲ್ ಅಭಿನಯದ ಬಾಲಿವುಡ್‌ನ ‘ಜರಾ ಹಟ್ಕೆ ಜರಾ ಬಚ್‌ಕೆ’ ಸಿನಿಮಾ ಜೂನ್ 2ರಂದು ಬಿಡುಗಡೆಯಾಗುತ್ತಿದ್ದು ಈ ಸಿನಿಮಾದ ಪ್ರಮೋಷನ್‌ನಲ್ಲಿ ಸಾರಾ ಬುಜಿಯಾಗಿದ್ದಾರೆ.