ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂಬಾಬ್ವೆ ತಂಡಕ್ಕೆ ಸಿಕಂದರ್ ನಾಯಕ

Published 1 ಜುಲೈ 2024, 14:41 IST
Last Updated 1 ಜುಲೈ 2024, 14:41 IST
ಅಕ್ಷರ ಗಾತ್ರ

ಹರಾರೆ: ಟಿ20 ಕ್ರಿಕೆಟ್ ವಿಶ್ವ ಚಾಂಪಿಯನ್ ಭಾರತ ತಂಡದ ವಿರುದ್ಧ ಜುಲೈ 6ರಿಂದ ಆರಂಭವಾಗುವ  ಐದು ಚುಟುಕು ಪಂದ್ಯಗಳ ಸರಣಿಗೆ ಅನುಭವಿ ಬ್ಯಾಟರ್ ಸಿಕಂದರ್ ರಝಾ ಅವರನ್ನು ಜಿಂಬಾಬ್ವೆ ತಂಡದ ನಾಯಕರಾಗಿ ಸೋಮವಾರ ನೇಮಕ ಮಾಡಲಾಗಿದೆ. 

ಜಿಂಬಾಬ್ವೆ ತಂಡದಲ್ಲಿ ಬೆಲ್ಜಿಯಂ ಮೂಲದ ಅಂಟಮ್ ನಖ್ವಿ ಸ್ಥಾನ ಪಡೆದಿದ್ದಾರೆ. ಆದರೆ ಪೌರತ್ವ ಸ್ಥಾನಮಾನದ ದೃಢೀಕರಣವು ಇನ್ನೂ ಆಗಬೇಕಿದ್ದು, ಅದರ ನಂತರವಷ್ಟೇ ಅವರು ಕಣಕ್ಕಿಳಿಯುವುದು ನಿರ್ಧಾರವಾಗಲಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿದ್ದ ಪಾಕಿಸ್ತಾನ ಮೂಲದ ದಂಪತಿಯ ಮಗ ನಖ್ವಿ. ನಂತರದ ದಿನಗಳಲ್ಲಿ ಅವರ ಕುಟುಂಬವು ಆಸ್ಟ್ರೇಲಿಯಾಕ್ಕೆ ವಲಸೆ ಹೋಯಿತು.  ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ತಂಡ ಪ್ರತಿನಿಧಿಸುವುದಾಗಿ ನಖ್ವಿ ತಿಳಿಸಿದ್ದರು. ಅದರ ನಂತರವಷ್ಟೇ ಅವರನ್ನು ಆಯ್ಕೆಗೆ ಪರಿಗಣೀಸಲಾಯಿತು.  

ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾದ ಬಳಿಕ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್  ಮಾರ್ಗದರ್ಶನದಲ್ಲಿ ತಂಡ ಬಲಪಡಿಸುವ ಗುರಿ ಹೊಂದಿರುವ ಜಿಂಬಾಬ್ವೆ, ಸಿಕಂದರ್ ನೇತೃತ್ವದಲ್ಲಿ ಯುವ ತಂಡವನ್ನು ಆಯ್ಕೆ ಮಾಡಿದೆ.

86 ಪಂದ್ಯಗಳನ್ನು ಆಡಿರುವ 38 ವರ್ಷದ ಸಿಕಂದರ್ ಬಲಗೈ ಬ್ಯಾಟರ್‌ ತಂಡದ ಅತ್ಯಂತ ಅನುಭವಿ ಆಟಗಾರನಾಗಿದ್ದು, 29 ವರ್ಷದ ಲ್ಯೂಕ್ ಜಾಂಗ್ವೆ 63 ಪಂದ್ಯಗಳಲ್ಲಿ ಆಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT