ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ಬಾಲ್‌ ಕ್ರಿಕೆಟ್‌ಗೂ ಫ್ರಾಂಚೈಸಿ ಲೀಗ್‌!

ಮುಂಬೈನಲ್ಲಿ ಮಾರ್ಚ್‌ 2 ರಂದ 9ರವರೆಗೆ ನಿಗದಿ
ನಾಗೇಶ್ ಶೆಣೈ
Published 27 ನವೆಂಬರ್ 2023, 19:07 IST
Last Updated 27 ನವೆಂಬರ್ 2023, 19:07 IST
ಅಕ್ಷರ ಗಾತ್ರ

ಮುಂಬೈ: ಈಗ ದೇಶದಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ಗೂ ದೊಡ್ಡ ಮಟ್ಟದಲ್ಲಿ ಫ್ರಾಂಚೈಸಿ ಆಧಾರಿತ ಲೀಗ್‌ ಯೋಗ ಒಲಿದಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಬೆಂಗಳೂರು ಸೇರಿ ಆರು ಫ್ರಾಂಚೈಸಿ ತಂಡಗಳ ಮೊದಲ ‘ಇಂಡಿ ಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್’ (ಐಎಸ್‌ಪಿಎಲ್) ಮುಂದಿನ ವರ್ಷದ ಮಾರ್ಚ್‌ 2 ರಿಂದ 9ರವರೆಗೆ ನಡೆಯ ಲಿದೆ. ಟಿ10 ಮಾದರಿಯ ಈ ಪ್ರಥಮ ಲೀಗ್‌ ಮುಂಬೈನಲ್ಲಿ ನಡೆಯಲಿದೆ.

‌ಐಎಸ್‌ಪಿಎಲ್‌ನ ವೆಬ್‌ಸೈಟ್‌, ಪ್ರೊಮೊ ವಿಡಿಯೊ, ಆಟಗಾರರ ನೋಂ ದಣಿ ಪ್ರಕ್ರಿಯೆಗೆ ಸೋಮವಾರ ವಾಂಖೆಡೆ ಕ್ರೀಡಾಂಗಣದ ಗರ್ವಾರೆ ಪೆವಿಲಿಯನ್‌ನಲ್ಲಿ ಚಾಲನೆ ನೀಡಲಾಯಿತು. ಭಾರತ ತಂಡದ ಮಾಜಿ ಮುಖ್ಯ ಕೋಚ್‌ ಹಾಗೂ ಐಎಸ್‌ಪಿಎಲ್‌ ಮೆಂಟರ್‌ ರವಿ ಶಾಸ್ತ್ರಿ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಖಜಾಂಚಿ ಆಶಿಶ್‌ ಶೆಲಾರ್‌, ಮುಂಬೈ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಅಮೋಲ್‌ ಕಾಳೆ ಈ ಸಮಾರಂಭದಲ್ಲಿ  ಉಪಸ್ಥಿತರಿದ್ದರು. ಈ ಸಂಬಂಧ ನಡೆದ ಸಂವಾದದಲ್ಲೂ ಅವರು ಪಾಲ್ಗೊಂಡರು.

ಮುಂಬೈನ ಕ್ರೀಡಾಂಗಣದಲ್ಲಿ ನಡೆ ಯುವ ಈ ಲೀಗ್‌ನಲ್ಲಿ ಭಾಗವಹಿಸುವ ಆರು ತಂಡಗಳೆಂದರೆ– ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತ ಮತ್ತು ಶ್ರೀನಗರ. ಕ್ರೀಡಾ ನಿರ್ವಹಣಾ ಸಂಸ್ಥೆಯಾದ ಸಿಸಿಎಸ್‌ ಸ್ಪೋರ್ಟ್‌ ಎಲ್‌ಎಲ್‌ಪಿ ಈ ಲೀಗ್‌ ಆಯೋಜಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರವಿ ಶಾಸ್ತ್ರಿ, ‘ಇದೊಂದು ಒಳ್ಳೆಯ ಉಪಕ್ರಮ. ಟೆನಿಸ್‌ ಬಾಲ್‌ ಕ್ರಿಕೆಟ್‌ ಈ ದೇಶದಲ್ಲಿ ಅತ್ಯಂತ ಜನಪ್ರಿಯ. ಮುಂಬೈನ ಓಣಿ, ಬೀದಿಗಳಲ್ಲೂ ಆಡು ತ್ತಾರೆ. ನಾನೂ ಮುಂಬೈನ ನವಜೀವನ ಸೊಸೈಟಿಯ ಪುಟ್ಟ ಜಾಗದಲ್ಲಿ ಆಡಿ ಬೆಳೆದವನು. ಈ ಲೀಗ್‌ನಲ್ಲಿ ಆಡಿ ಯಶಸ್ಸು ಗಳಿಸಿದವರು ಮುಂದೆ ಐಪಿಎಲ್‌, ಭಾರತ ತಂಡಕ್ಕೆ ಆಡುವಂತಾದರೆ ಅದು ಲೀಗ್‌ನ ದೊಡ್ಡ ಯಶಸ್ಸು ಎನಿಸಲಿದೆ’ ಎಂದು ಅಭಿಪ್ರಾಯಪಟ್ಟರು.

‘ಟೆಲಿವಿಷನ್ ಪ್ರಸಾರದ ಮೂಲಕ ಈ ಲೀಗ್‌ ಪ್ರೇಕ್ಷಕ ಸಮೂಹ ಕಂಡುಕೊಳ್ಳಲಿ ದೆ. ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಅವರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಬ್ರ್ಯಾಂಡ್‌ಗಳಿಗೆ ರಾಯಭಾರಿಗಳಾಗುವ ಅವಕಾಶಗಳೂ ಒದಗಲಿವೆ’ ಎಂದರು.

ರಾಷ್ಟ್ರೀಯ ಮಟ್ಟದಲ್ಲಿ ಆಟಗಾರರಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ಈ ಲೀಗ್‌ ಉತ್ತಮ ಅವಕಾಶವಾಗಿದೆ ಎಂದು ಆಶಿಶ್‌ ಶೆಲ್ಲಾರ್ ಹೇಳಿದರು.

ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಮುಂಬೈನ ಸುಮೀತ್‌ ಧೇಖಲೆ ಅವರು ಲೀಗ್‌ನ ಮೊದಲ ಆಟಗಾರನಾಗಿ ನೋಂದಾಯಿಸಿಕೊಂಡರು. ‘ಇದು ನಮಗೆಲ್ಲಾ ದೊಡ್ಡ ಅವಕಾಶ. ಇದನ್ನು ನಾವೆಲ್ಲರೂ ಬಾಚಿಕೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT