ಜೊಹಾನೆಸ್ಬರ್ಗ್: ಲಾರ್ಡ್ಸ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡು ಬಂದ ದಕ್ಷಿಣ ಆಫ್ರಿಕಾ ತಂಡ ಬುಧವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಾವಿರಾರು ಮಂದಿ ಕ್ರಿಕೆಟ್ ಪ್ರೇಮಿಗಳು ಸ್ವಾಗತಿಸಿದರು.

ತೆಂಬಾ ಬವುಮಾ ನಾಯಕತ್ವದ ಹರಿಣಗಳ ತಂಡ 5 ವಿಕೆಟ್ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ 27 ವರ್ಷಗಳ ನಂತರ ಐಸಿಸಿ ಟ್ರೋಫಿಯೊಂದನ್ನು ಗೆದ್ದುಕೊಂಡಿತ್ತು.

ತಂಪಾದ ವಾತಾವರಣದಲ್ಲಿ ಬವುಮಾ ಮತ್ತು ಕೋಚ್ ಶುಕ್ರಿ ಕೊನ್ರಾಡ್ ಅವರು ಮೊದಲನೆಯವರಾಗಿ ವಿಮಾನ ನಿಲ್ದಾಣದಿಂದ ಹೊರಬಂದಾಗ ಬೆಂಬಲಿಗರು ಹರ್ಷೋದ್ಗಾರಗಳ ಸ್ವಾಗತ ನೀಡಿದರು. ಅವರಿಬ್ಬರೂ ಪ್ರಶಸ್ತಿಯಾದ ಗದೆಯನ್ನು ಹಿಡಿದಿದ್ದರು.

ಉಳಿದವರೂ ಹೂಗುಚ್ಛಗಳನ್ನು ಸ್ವೀಕರಿಸಿದರು. ಕೆಲವು ಆಟಗಾರರಿಗೆ ಕುಟುಂಬಸದಸ್ಯರು ಆಲಿಂಗನದ ಸ್ವಾಗತ ನೀಡಿದರು. ಆಟಗಾರರು ಈ ವೇಳೆ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು..

ತಂಡದ ಆಟಗಾರರು ನಂತರ ಜೊಹಾನೆಸ್ಬರ್ಗ್ನಲ್ಲಿರುವ ಕ್ರಿಕೆಟ್ ಸೌತ್ ಆಫ್ರಿಕಾ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾದರು.

ಮರ್ಕರಂ, ರಬಾಡಗೆ ವಿಶ್ರಾಂತಿ

ಜಿಂಬಾಬ್ವೆ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಡಬ್ಲ್ಯುಟಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭ ಆಟಗಾರ ಏಡನ್ ಮರ್ಕರಂ ಮತ್ತು ವೇಗದ ಬೌಲರ್ ಕಗಿಸೊ ರಬಾಡ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ತೆಂಬಾ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಜೂನ್ 28ರಿಂದ ಬುಲಾವಯೊದಲ್ಲಿ ನಡೆಯಲಿದೆ.

ಐದು ಮಂದಿ ಹೊಸಬರು ಅವಕಾಶ ಪಡೆದಿದ್ದಾರೆ. ಇವರಲ್ಲಿ ದಕ್ಷಿಣ ಆಫ್ರಿಕಾ ಎ ತಂಡದಲ್ಲಿ ಆಡಿದ್ದ ಲುಹಾನ್ ಡ್ರೆ ಪ್ರಿಟೋರಿಯಸ್ ಮತ್ತು ಲೆಸೆಗೊ ಸೆನೊಕ್ವಾನೆ ಒಳಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.