ಬುಧವಾರ, ಮೇ 25, 2022
26 °C

ದಕ್ಷಿಣ ಆಫ್ರಿಕಾದ ಎರಾಸ್ಮಸ್ ಐಸಿಸಿ ವರ್ಷದ ಅಂಪೈರ್

ಐಎಎನ್ಎಸ್ Updated:

ಅಕ್ಷರ ಗಾತ್ರ : | |

ದುಬೈ: ದಕ್ಷಿಣ ಆಫ್ರಿಕಾದ ಮರೈಸ್ ಎರಾಸ್ಮಸ್ ಅವರು 2021ನೇ ಸಾಲಿನ ಐಸಿಸಿ ವರ್ಷದ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ. 

ಈ ಹಿಂದೆ 2016 ಮತ್ತು 2017ರಲ್ಲಿ ಎರಡು ಬಾರಿ ಡೇವಿಡ್ ಶೆಫರ್ಡ್ ಟ್ರೋಫಿಯನ್ನು ಗೆದ್ದಿದ್ದ ಎರಾಸ್ಮಸ್ ಮೂರನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಇತ್ತೀಚಿನ ಏಕದಿನ ಸರಣಿಯಲ್ಲಿ ಅಂಪೈರ್ ಆಗಿದ್ದ ಎರಾಸ್ಮಸ್ 100 ಏಕದಿನ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಮೂರನೇ ದಕ್ಷಿಣ ಆಫ್ರಿಕಾದ ಅಂಪೈರ್ ಖ್ಯಾತಿಗೆ ಪಾತ್ರರಾಗಿದ್ದಾರೆ. ರೂಡಿ ಕೊರ್ಟ್‌ಜೆನ್ ಮತ್ತು ಡೇವಿಡ್ ಆರ್ಚರ್ಡ್ ಅವರ ಹಾದಿಯಲ್ಲೇ ಸಾಗಿದ ಎರಾಸ್ಮಸ್ ಈ ಸಾಧನೆ ಮಾಡಿದ ವಿಶ್ವದ 18 ನೇ ಅಂಪೈರ್ ಆಗಿದ್ದಾರೆ.

ಎರಾಸ್ಮಸ್ ಅವರು 2007 ರಿಂದ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 70 ಟೆಸ್ಟ್‌ಗಳು, 35 ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳು ಮತ್ತು 18 ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು