ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾಟ್‌ ಫಿಕ್ಸಿಂಗ್‌: ಶ್ರೀಶಾಂತ್‌ ಅಜೀವ ನಿಷೇಧ ಶಿಕ್ಷೆ ಏಳು ವರ್ಷಕ್ಕೆ ಮೊಟಕು

ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿರುವ ನಿಷೇಧ ಅವಧಿ
Last Updated 20 ಆಗಸ್ಟ್ 2019, 14:06 IST
ಅಕ್ಷರ ಗಾತ್ರ

ಮುಂಬೈ: ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗದ ಬೌಲರ್‌ ಶಾಂತಕುಮಾರನ್‌ ಶ್ರೀಶಾಂತ್‌ ಅವರ ನಿಷೇಧ ಶಿಕ್ಷೆಯನ್ನು ಏಳು ವರ್ಷಗಳಿಗೆ ಇಳಿಸಲಾಗಿದೆ. ಅವರ ನಿಷೇಧ ಶಿಕ್ಷೆ ಮುಂದಿನ ವರ್ಷದ ಸೆಪ್ಟೆಂಬರ್20ರಂದು ಕೊನೆಗೊಳ್ಳಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಿಳಿಸಿದೆ.

ಶ್ರೀಶಾಂತ್‌ ಮೇಲೆ ಹೇರಿದ್ದ ಅಜೀವ ನಿಷೇಧ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿ, ನಿಷೇಧ ಅವಧಿಯನ್ನು ಪುನರ್‌ಪರೀಶೀಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.

ಶ್ರೀಶಾಂತ್‌ ಅವರು ಯಾವುದೇ ವಾಣಿಜ್ಯ ಕ್ರಿಕೆಟ್‌ ಚಟುವಟಿಕೆಯಲ್ಲಿ ಅಥವಾ ಬಿಸಿಸಿಐ ಅಥವಾ ಅಂಗಸಂಸ್ಥೆಗಳ ಚಟುವಟಿಕೆಯಲ್ಲಿ ತೊಡಗದಂತೆ ಏಳು ವರ್ಷಗಳ ನಿಷೇಧ ಹೇರಲಾಗುತ್ತಿದೆ. ನಿಷೇಧ ಶಿಕ್ಷೆ 2013ರ ಸೆ. 13ರಿಂದ ಪೂರ್ವಾನ್ವಯವಾಗಿದೆ ಎಂದು ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಶಾಂತ್‌ ಜೊತೆ ಅವರು ಆಡುತ್ತಿದ್ದ ರಾಜಸ್ತಾನ್‌ ರಾಯಲ್ಸ್‌ ಸಹ ಆಟಗಾರರಾದ ಅಜಿತ್‌ ಚಾಂಡಿಲಾ ಮತ್ತು ಅಂಕೀತ್‌ ಚವಾಣ್‌ ಅವರನ್ನು ದೆಹಲಿ ಪೊಲೀಸರು ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಡೆದಿತ್ತೆನ್ನಲಾದ ಸ್ಪಾಟ್‌ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಿಸಿ 2013ರ ಮೇ ತಿಂಗಳಲ್ಲಿ ಬಂಧಿಸಿದ್ದರು. ನಂತರ ಬಿಸಿಸಿಐ ಈ ಆಟಗಾರರ ವಿರುದ್ಧ ಕ್ರಮ ಕೈಗೊಂಡಿತ್ತು.

ತಮ್ಮ ವಿರುದ್ಧ ಆರೋಪಗಳೆಲ್ಲವೂ ಸುಳ್ಳು ಎಂದು ಶ್ರೀಶಾಂತ್‌ ಹೇಳುತ್ತ ಬಂದಿದ್ದರು.

ಅವರು ರಾಷ್ಟ್ರೀಯ ತಂಡಕ್ಕೆ 27 ಟೆಸ್ಟ್‌ ಪಂದ್ಯಗಳ ಜೊತೆ 53 ಏಕದಿನ ಹಾಗೂ 10 ಟಿ–20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 169 ವಿಕೆಟ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT