ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ಇಲ್ಲ, ಆದರೆ ಚೆನ್ನಾಗಿ ಆಡಬೇಕಾದ ಜವಾಬ್ದಾರಿ ಇದೆ: ಕಾಶ್ಮೀರ ಪ್ರತಿಭೆ ಸಮದ್

Last Updated 2 ಅಕ್ಟೋಬರ್ 2020, 11:26 IST
ಅಕ್ಷರ ಗಾತ್ರ

ಸನ್‌ರೈಸರ್ಸ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಐಪಿಎಲ್‌ನಲ್ಲಿ ಇದೇ ಮೊದಲ ಸಲ ಆಡುತ್ತಿರುವಜಮ್ಮು ಕಾಶ್ಮೀರದ ಯುವ ಆಟಗಾರ ಅಬ್ದುಲ್‌ ಸಮದ್‌ ತಮಗೆ ಯಾವುದೇ ಒತ್ತಡವಿಲ್ಲ. ಆದರೆ, ಚೆನ್ನಾಗಿ ಆಡಬೇಕಾದ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಜಮ್ಮು ಕಾಶ್ಮೀರದ 3ನೇ ಆಟಗಾರ ಎಂಬ ಖ್ಯಾತಿ ಹೊಂದಿರುವ ಈ ಆಟಗಾರ, ಟೂರ್ನಿಯ 11ನೇ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಆ ಪಂದ್ಯದಲ್ಲಿ ಅಜೇಯ 12 ರನ್‌ ಗಳಿಸಿದ್ದರು.ಸಮದ್ ಅವರಿಗೂ ಮುನ್ನ ಪರ್ವೇಜ್‌ ರಸೂಲ್‌ ಮತ್ತುರಸಿಖ್‌ ಸಲಾಂ ಐಪಿಎಲ್‌ನಲ್ಲಿ ಆಡಿದ್ದರು.

ಸದ್ಯ ಇದುವರೆಗೆ10 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಸಮದ್‌ 592 ರನ್‌ ಗಳಿಸಿದ್ದಾರೆ. ಜೊತೆಗೆ 12 ಟಿ20 ಪಂದ್ಯಗಳಿಂದ 42ರ ಸರಾಸರಿಯಲ್ಲಿ 252 ರನ್‌ ಕಲೆಹಾಕಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಅವರು ಬೌಲಿಂಗ್‌ ದಂತಕತೆ ಮುತ್ತಯ್ಯ ಮುರುಳೀಧರನ್‌, ವಿವಿಎಸ್‌ ಲಕ್ಷ್ಮಣ್‌ ಮತ್ತು ಕೋಚ್‌ ಟ್ರೆವೊರ್‌ ಬೇಯ್ಲಿಸ್‌ ಅವರಿಂದ ಕ್ರಿಕೆಟ್‌ ಪಾಠ ಕಲಿಯಲಿದ್ದಾರೆ. ದಿಗ್ಗಜರ ಜೊತೆಗೆ ಡ್ರೆಸಿಂಗ್‌ ರೂಂ ಹಂಚಿಕೊಳ್ಳುವ ಅನುಭವದ ಬಗ್ಗೆಮಾತನಾಡಿರುವ ಸಮದ್‌, ‘ಅವೆರಲ್ಲರೂ ಉತ್ತಮರು. ಹಾಗಾಗಿ ನನಗೆ ಇದೇ ಮೊದಲ ಟೂರ್ನಿ ಎಂದೆನಿಸುತ್ತಿಲ್ಲ. ಡ್ರೆಸ್ಸಿಂಗ್‌ ರೂಮ್‌ನಿಂದ, ಕೋಚ್‌ಗಳಿಂದ ಮತ್ತು ನಾಯಕನಿಂದ ಸಾಕಷ್ಟು ಬೆಂಬಲ ದೊರೆತಿದೆ.ನನ್ನ ಮೇಲೆ ಒತ್ತಡವಿದೆ ಎಂದು ಭಾವಿಸಿಲ್ಲ. ಆದರೆ, ತಂಡಕ್ಕಾಗಿ ಚೆನ್ನಾಗಿ ಆಡಬೇಕಾದ ಜವಾಬ್ದಾರಿ ಇದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಲು ಜಯಸುತ್ತೇನೆ’ಎಂದು ಹೇಳಿದ್ದಾರೆ.

ತಂಡದಲ್ಲಿರುವ ಅಫ್ಗಾನಿಸ್ತಾನದ ‌ಸ್ಟಾರ್ ಆಟಗಾರ ರಶೀದ್‌ ಖಾನ್‌ ಬಗ್ಗೆ ಮಾತನಾಡಿರುವ ಸಮದ್‌, ‘ರಶೀದ್‌ ಅವರು ಶ್ರೇಷ್ಠ ಲೆಗ್‌ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂಬುದು ಎಲ್ಲರಿಗೂ ಗೊತ್ತು. ಪಂದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತು ಬೇರೆ ಬೇರೆ ಬ್ಯಾಟ್ಸ್‌ಮನ್‌ಗಳೆದುರು ನಿರಂತರವಾಗಿ ಉತ್ತಮ ಲಯದಲ್ಲಿ ಬೌಲಿಂಗ್‌ ಮಾಡುವುದು ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಅವರಿಂದ ಕಲಿಯುತ್ತಿದ್ದೇನೆ.ಅವರಿಂದ ಕಲಿಯುವುದು ಇನ್ನೂ ಸಾಕಷ್ಟಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT