ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್), ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಹೆನ್ರಿಚ್ ಕ್ಲಾಸೆನ್ ಹೇಳಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಎದುರಾದ ಐದು ವಿಕೆಟ್ ಅಂತರದ ಸೋಲಿನ ಬಳಿಕ ಮಾತನಾಡಿರುವ ಅವರು, ಎಲ್ಲ ತಂಡಗಳೂ ಉತ್ತಮವಾಗಿ ಆಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 190 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಎಲ್ಎಸ್ಜಿ, 16.1 ಓವರ್ಗಳಲ್ಲಿ 193 ರನ್ ಗಳಿಸಿ ಗೆಲುವು ಸಾಧಿಸಿತು.

ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಎರಡು ಪಂದ್ಯಗಳಲ್ಲಿ ಆಡಿವೆ. ಎಸ್ಆರ್ಎಚ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 44 ರನ್ಗಳಿಂದ ಗೆದ್ದಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಎದುರು 1 ವಿಕೆಟ್ ಅಂತರದ ಸೋಲು ಅನುಭವಿಸಿದ್ದ ಎಲ್ಎಸ್ಜಿಗೆ ಇದು ಮೊದಲ ಜಯ.

ಪಂದ್ಯದ ನಂತರ ಮಾತನಾಡಿದ ಕ್ಲಾಸೆನ್, 'ನಾವು (ಎಸ್ಆರ್ಎಚ್) ಐಪಿಎಲ್ನಲ್ಲಿ ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ. ಎಲ್ಲರೂ, ಅದಲ್ಲೂ ಮುಖ್ಯವಾಗಿ ಇಂತಹ ವಿಕೆಟ್ಗಳಲ್ಲಿ ಉತ್ತಮ ಆಟವಾಡುತ್ತಿದ್ದಾರೆ. ಈ ರೀತಿಯ ಪಿಚ್ಗಳಲ್ಲಿ ಯಾವುದೇ ಬೌಲಿಂಗ್ ವಿಭಾಗದ ಮೇಲೆ ಒತ್ತಡ ಹೇರಬಹುದು. ಆದಾಗ್ಯೂ, ಅವರು (ಎಲ್ಎಸ್ಜಿ) ಮಧ್ಯಮ ಓವರ್ಗಳಲ್ಲಿ ಚೆನ್ಣಾಗಿ ಬೌಲಿಂಗ್ ಮಾಡಿದರು. ಹಾಗಾಗಿ, ಅವರಿಗೂ ಶ್ರೇಯ ಸಲ್ಲಬೇಕು. ಅವರು ಆರಂಭದಲ್ಲೇ ವಿಕೆಟ್ಗಳನ್ನು ಕಬಳಿಸಿದ್ದರಿಂದ ನಮ್ಮ ವೇಗಕ್ಕೆ ತಡೆ ಬಿತ್ತು. ಇವೆಲ್ಲವೂ ಆಟದ ಭಾಗ' ಎಂದು ಹೇಳಿದ್ದಾರೆ.

ಸ್ಫೋಟಕ ಬ್ಯಾಟರ್ಗಳ ದಂಡೇ ಇರುವ ಎಸ್ಆರ್ಎಚ್ ಮೊದಲ ಪಂದ್ಯದಲ್ಲಿ ರಾಜಸ್ಥಾನ ಎದುರು ನಿಗದಿತ 20 ಓವರ್ಗಳಲ್ಲಿ 286 ರನ್ ಗಳಿಸಿತ್ತು. ಹೀಗಾಗಿ, ತವರಿನ (ಹೈದರಾಬಾದ್) ಮೈದಾನದಲ್ಲಿ ಮತ್ತೊಂದು ಜಯ ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಆದರೆ, ಆ ತಂಡದ ಲೆಕ್ಕಾಚಾರವನ್ನು ಎಲ್ಎಸ್ಜಿ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ತಲೆಕೆಳಗಾಗಿಸಿದರು.

ಬಿರುಸಿನ ಬ್ಯಾಟರ್ ಅಭಿಷೇಕ್ ಶರ್ಮಾ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಇಶಾನ್ ಕಿಶನ್, ಅಭಿನವ್ ಮನೋಹರ್ ಹಾಗೂ ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡುವ ಮೂಲಕ, ಎಸ್ಆರ್ಎಚ್ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು. ಉಳಿದ ಬೌಲರ್ಗಳೂ ನಿರಂತರವಾಗಿ ವಿಕೆಟ್ ಕಬಳಿಸುತ್ತಾ ಸಾಗಿದ್ದರಿಂದ, ಎಸ್ಆರ್ಎಚ್ಗೆ 200ರ ಗಡಿ ದಾಟಲು ಸಾಧ್ಯವಾಗಿರಲಿಲ್ಲ.
.IPL 2025: SRH ಎದುರು ಮಿಂಚಿ ಪಂದ್ಯಶ್ರೇಷ್ಠ ಎನಿಸಿದ 'Unsold' ಶಾರ್ದೂಲ್ ಠಾಕೂರ್.ವೃತ್ತಿ ಬದುಕಿನ ಈ ಹಂತದಲ್ಲೂ ಸುಧಾರಣೆಗೆ ಒತ್ತು ನೀಡುವ ಕೊಹ್ಲಿ: ಡಿಕೆ ಶ್ಲಾಘನೆ.IPL 2025 | RCB vs CSK: ಚೆನೈನಲ್ಲಿ ಮೋಡಿ ಮಾಡುತ್ತಾ ಆರ್ಸಿಬಿ?.IPL 2025 | RCBಗೆ ಚೆನ್ನೈನಲ್ಲಿ ದೊಡ್ಡ ಸವಾಲು ಕಾದಿದೆ: ಶೇನ್ ವಾಟ್ಸನ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.