ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್: ಕ್ಲೀನ್‌ಸ್ವೀಪ್ ಹಾದಿಯಲ್ಲಿ ಲಂಕಾ

ಮೂರನೇ ದಿನ ಹಸನ್ ಮಹಮೂದ್ ದಾಳಿಗೆ ಕುಸಿದ ಪ್ರವಾಸಿ ತಂಡ
Published 1 ಏಪ್ರಿಲ್ 2024, 16:33 IST
Last Updated 1 ಏಪ್ರಿಲ್ 2024, 16:33 IST
ಅಕ್ಷರ ಗಾತ್ರ

ಚಿತ್ತಗಾಂಗ್ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಸೋಮವಾರ ಬ್ಯಾಟಿಂಗ್ ಕುಸಿತದ ಹೊರತಾಗಿಯೂ ಶ್ರೀಲಂಕಾ ಎರಡು ಟೆಸ್ಟ್‌ಗಳ ಸರಣಿ ಗೆಲ್ಲುವ ಹಾದಿಯಲ್ಲಿದೆ. 

ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಆರು ವಿಕೆಟ್‌ಗೆ 102 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನ ಬೃಹತ್ ಮೊತ್ತ ಸೇರಿ ಒಟ್ಟಾರೆ 455 ರನ್‌ಗಳ ಮುನ್ನಡೆ ಗಳಿಸಿದೆ. ಹಸನ್ ಮಹಮೂದ್ (51ಕ್ಕೆ4) ಮತ್ತು ಖಲೀದ್ ಅಹ್ಮದ್ (29ಕ್ಕೆ2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.

ಏಂಜೆಲೊ ಮ್ಯಾಥ್ಯೂಸ್ (ಅಜೇಯ 39) ಅವರೊಂದಿಗೆ ಜಯಸೂರ್ಯ (ಅಜೇಯ 3 ರನ್) ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. 

ಪ್ರವಾಸಿ ತಂಡವು ಮೊದಲು ಬಾಂಗ್ಲಾದೇಶವನ್ನು 178 ರನ್‌ಗಳಿಗೆ ಆಲೌಟ್ ಮಾಡಿತು. ಆದರೆ ಫಾಲೋ-ಆನ್ ಹೇರಲಿಲ್ಲ. 

ವೇಗದ ಬೌಲರ್ ಅಸಿತಾ ಫರ್ನಾಂಡೊ 34 ರನ್‌ಗೆ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ಸತತ ಮೂರನೇ ಬಾರಿಗೆ 200 ಕ್ಕಿಂತ ಕಡಿಮೆ ರನ್‌ಗಳಿಗೆ ಆಲೌಟ್ ಆಯಿತು. ವಿಶ್ವ ಫರ್ನಾಂಡೊ ಅವರು 38 ರನ್‌ಗಳಿಗೆ 2 ವಿಕೆಟ್ ಪಡೆದರು. ಇದರಲ್ಲಿ ಗರಿಷ್ಠ ರನ್ ಸ್ಕೋರ್ ಜಾಕಿರ್ ಹಸನ್ ಅವರ ವಿಕೆಟ್ ಸಹ ಸೇರಿದೆ. 

ನಾಯಕ ನಜ್ಮುಲ್ ಹುಸೇನ್ ಶಾಂಟೊ 1 ರನ್ ಗಳಿಸಿ ಎಡಗೈ ಸ್ಪಿನ್ನರ್ ಪ್ರಬತ್ ಜಯಸೂರ್ಯ ಅವರಿಗೆ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ದೊಡ್ಡ ಹೊಡೆತ. ನಂತರ ವಿಶ್ವ ಅವರು ನೈಟ್ ವಾಚ್ ಮ್ಯಾನ್ ತೈಜುಲ್ ಇಸ್ಲಾಂ ಅವರನ್ನು 22 ರನ್ ಗಳಿಗೆ ಔಟ್ ಮಾಡಿದರು.

ಈ ವರ್ಷ ಪದಾರ್ಪಣೆ  ಪಂದ್ಯ ಆಡುತ್ತಿರುವ ಸ್ಪೋಟಕ ಬ್ಯಾಟರ್ ಶಕೀಬ್ ಅಲ್ ಹಸನ್ 15 ರನ್‌ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 

ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 328 ರನ್ ಗಳಿಂದ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT