IPL 2021: ಭರತ್ ಸಿಕ್ಸರ್; ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಗೆಲುವಿನ 'ಸೆಂಚುರಿ'

ದುಬೈ: ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶ್ರೀಕರ್ ಭರತ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದಾರೆ.
ಇದು ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿಗೆ ಒಲಿದ 100ನೇ ಗೆಲುವಾಗಿದೆ. ಈ ಮೂಲಕ ನೂತನ ಮೈಲಿಗಲ್ಲು ತಲುಪಿದೆ.
ಇದನ್ನೂ ಓದಿ: IPL 2021 playoffs ವೇಳಾಪಟ್ಟಿ: ಡೆಲ್ಲಿ vs ಚೆನ್ನೈ; ಆರ್‌ಸಿಬಿ vs ಕೆಕೆಆರ್
165 ರನ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಶ್ರೀಕರ್ ಭರತ್ (ಅಜೇಯ 78) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (ಅಜೇಯ 51) ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಲು ಸಾಧ್ಯವಾಯಿತು.
A century of wins in the #IPL and to bring it up with a last ball 6️⃣ was just perfect. 💯
Drop a ❤️ for this team, 12th Man Army! #PlayBold #WeAreChallengers #ನಮ್ಮRCB #IPL2021 #RCBvDC pic.twitter.com/d4V0C2Az6a
— Royal Challengers Bangalore (@RCBTweets) October 8, 2021
ಚೊಚ್ಚಲ ಐಪಿಎಲ್ ಕಿರೀಟ ಎದುರು ನೋಡುತ್ತಿರುವ ಆರ್‌ಸಿಬಿ ತಂಡವೀಗ ಅಕ್ಟೋಬರ್ 11, ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.
ಈ ಹಿಂದೆ ಮೂರು ಬಾರಿ 'ರನ್ನರ್-ಅಪ್' ಪ್ರಶಸ್ತಿ ಗೆದ್ದಿರುವುದು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ ಶ್ರೇಷ್ಠ ಸಾಧನೆಯಾಗಿದೆ. 2009, 2011 ಹಾಗೂ 2016ರಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿತ್ತು.
ಪ್ರಸಕ್ತ ಸಾಲಿನಲ್ಲಿ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ವಿರುದ್ಧ ಎರಡು ಬಾರಿಯೂ ಆರ್‌ಸಿಬಿ ಗೆದ್ದ ಸಾಧನೆ ಮಾಡಿದೆ. ಭಾರತದಲ್ಲಿ ನಡೆದ ಟೂರ್ನಿಯ ಮೊದಲ ಹಂತದಲ್ಲಿ ಅಹಮದಾಬಾದ್‌ನಲ್ಲಿ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.