ದುಬೈ: ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ತಂಡವು ಟ್ರೋಫಿ ಎತ್ತಿ ಹಿಡಿದಿದೆ. ಇದೂ ಸೇರಿ ಭಾರತವು ಈವರೆಗೆ 7 ಬಾರಿ ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಹಾಲಿ, ಮಾಜಿ ಕ್ರಿಕೆಟಿಗರು ಈ ಸಂಭ್ರಮವನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಾಗ ಭಾರತ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮತ್ತು ತಂಡದ ನಾಯಕತ್ವ ವಹಿಸಿದ್ದ ಕಪಿಲ್ ದೇವ್ ಭಾರತ ಟ್ರೋಫಿ ಗೆಲ್ಲುತ್ತಿದ್ದಂತೆ ಕುಣಿದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ ಟ್ರೋಫಿ ಸ್ವೀಕರಿಸುತ್ತಿದ್ದಂತೆ ಇತ್ತ ಮೈದಾನದಲ್ಲಿ ನಿರೂಪಕಿ ಜೊತೆ ಚರ್ಚೆಯಲ್ಲಿ ತೊಡಗಿದ್ದ ಸುನಿಲ್ ಗಬಾಸ್ಕರ್ ಕುಣಿಯುತ್ತಿರುವ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಇತ್ತ, ಟಿ.ವಿ ಲೈವ್ ಚರ್ಚೆಯಲ್ಲಿ ತೊಡಗಿದ್ದ ಕಪಿಲ್ ದೇವ್ ಸಹ ಕುಣಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಈವರೆಗೆ ಭಾರತ ತಂಡವು ಈ ವರೆಗೆ ಎರಡು ಏಕದಿನ ವಿಶ್ವಕಪ್, ಎರಡು ಟಿ20 ವಿಶ್ವಕಪ್, ಮೂರು ಚಾಂಪಿಯನ್ಸ್ ಟ್ರೋಫಿ ಸೇರಿ 7 ಬಾರಿ ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

ಏಳು ಐಸಿಸಿ ಟ್ರೋಫಿ

* ಏಕದಿನ ವಿಶ್ವಕಪ್: 1983, 2011

* ಟಿ–20 ವಿಶ್ವಕಪ್: 2007, 2014

* ಚಾಂಪಿಯನ್ಸ್ ಟ್ರೋಫಿ: 2002, 2013, 2025
.Champions Trophy Final: ಮರಳುನಾಡಿನಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಕಿರೀಟ .ಪ್ರಧಾನಿ ಮೋದಿ, ಪಾಕ್ನ ಶೋಯೆಬ್ ಅಖ್ತರ್ ಸೇರಿ ಭಾರತ ತಂಡಕ್ಕೆ ಪ್ರಶಂಸೆಯ ಮಹಾಪೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.