ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ ತಂಡಕ್ಕೆ ಸುನೀಲ್ ಜೋಶಿ ಕೋಚ್

Last Updated 3 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಕರ್ನಾಟಕದ ಹಿರಿಯ ಕ್ರಿಕೆಟಿಗ ಸುನೀಲ್ ಜೋಶಿ ಅವರನ್ನು ಉತ್ತರಪ್ರದೇಶ ರಣಜಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದಾರೆ.

ಎಡಗೈ ಸ್ಪಿನ್ನರ್ ಜೋಶಿ ಅವರು ಒಂದು ವರ್ಷ ಕಾಲ ತಂಡಕ್ಕೆ ತರಬೇತಿ ನೀಡುವರು. ಇದೇ 20ರಿಂದ ಅವರು ಉತ್ತರಪ್ರದೇಶ ತಂಡದ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಜೋಶಿ ಅವರು ಭಾರತ ತಂಡದಲ್ಲಿ 15 ಟೆಸ್ಟ್ ಮತ್ತು 69 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದರು. 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.

ಬಾಂಗ್ಲಾದೇಶ ತಂಡಕ್ಕೆ ಸ್ಪಿನ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಈಚೆಗೆ ವಿಶ್ವಕಪ್ ಟೂರ್ನಿ ಮುಗಿದ ನಂತರ ಅವರ ಕಾರ್ಯಾವಧಿ ಮುಗಿದಿತ್ತು. ಭಾರತ ತಂಡದ ಬೌಲಿಂಗ್ ಕೋಚ್‌ ಹುದ್ದೆಗೂ ಅವರು ಅರ್ಜಿ ಹಾಕಿದ್ದರು.

‘ಸುನಿಲ್ ಜೋಶಿ ಅವರು ನಮ್ಮ ತಂಡಕ್ಕೆ ಒಂದು ವರ್ಷ ಅವಧಿಗೆ ಕೋಚ್ ಆಗಿ ನೇಮಕವಾಗಿದ್ದಾರೆ. ಇದೇ ತಿಂಗಳೂ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯೊಂದಿಗೆ ಅವರು ಕೆಲಸ ಆರಂಭಿಸುವರು’ ಎಂದು ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಕಾರ್ಯದರ್ಶಿ ಯುಧ್‌ವೀರ್ ಸಿಂಗ್ ತಿಳಿಸಿದ್ದಾರೆ.

ಹೋದ ವರ್ಷ ಉತ್ತರಪ್ರದೇಶ ತಂಡಕ್ಕೆ ಕರ್ನಾಟಕದವರೇ ಆದ ಮನ್ಸೂರ್ ಅಲಿ ಖಾನ್ ಅವರು ಕೋಚ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT