ಶುಕ್ರವಾರ, ಜನವರಿ 22, 2021
27 °C

₹10 ಕೋಟಿ ದೇಣಿಗೆ ನೀಡಲಿರುವ ಸನ್‌ರೈಸರ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಕೋವಿಡ್‌–19 ವಿರುದ್ಧ ಕೇಂದ್ರ ಸರ್ಕಾರ ಸಾರಿರುವ ಹೋರಾಟಕ್ಕೆ ಕೈಜೋಡಿಸಿದೆ.

ಸನ್‌ರೈಸರ್ಸ್‌ ಫ್ರಾಂಚೈಸ್‌ ₹10 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ.

‘ಸನ್‌ರೈಸರ್ಸ್‌ ತಂಡದ ಒಡೆತನ ಹೊಂದಿರುವ ಸನ್‌ ಟಿವಿ ಸಮೂಹವು ಕೋವಿಡ್‌–19 ಪರಿಹಾರ ನಿಧಿಗೆ ₹10 ಕೋಟಿ ನೀಡಲಿದೆ’ ಎಂದು ಫ್ರಾಂಚೈಸ್‌, ಗುರುವಾರ ಟ್ವೀಟ್‌ ಮಾಡಿದೆ.

ಸನ್‌ರೈಸರ್ಸ್‌ ಫ್ರಾಂಚೈಸ್‌ನ ಈ ನಿರ್ಧಾರದ ಬಗ್ಗೆ ನಾಯಕ ಡೇವಿಡ್‌ ವಾರ್ನರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸನ್‌ ಟಿವಿ ಸಮೂಹ ಅತ್ಯುತ್ತಮ ಕೆಲಸ ಮಾಡಿದೆ’ ಎಂದು ಆಸ್ಟ್ರೇಲಿಯಾದ ವಾರ್ನರ್‌ ಟ್ವೀಟ್‌ ಮಾಡಿದ್ದಾರೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್‌ ಫ್ರಾಂಚೈಸ್‌ಗಳೂ ಈ ಹಿಂದೆ ಪ್ರಧಾನ ಮಂತ್ರಿಗಳ ‘ಕೇರ್ಸ್‌’ ನಿಧಿಗೆ ದೇಣಿಗೆ ನೀಡಿದ್ದವು. ವಿರಾಟ್‌ ಕೊಹ್ಲಿ, ಸುನಿಲ್‌ ಗಾವಸ್ಕರ್‌, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ ಸೇರಿದಂತೆ ಹಲವು ಕ್ರಿಕೆಟಿಗರೂ ಸಹಾಯ ಹಸ್ತ ಚಾಚಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು