ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಂಟಿಯಿಂದ ಚೇತೇಶ್ವರಗೆ ಕೊಕ್‌

Published 22 ಆಗಸ್ಟ್ 2024, 16:38 IST
Last Updated 22 ಆಗಸ್ಟ್ 2024, 16:38 IST
ಅಕ್ಷರ ಗಾತ್ರ

ಲಂಡನ್‌: ಆಸ್ಟ್ರೇಲಿಯಾದ ಡೇನಿಯಲ್‌ ಹ್ಯೂಸ್‌‍ ಅವರ ಸೇವೆ ಉಳಿಸಿಕೊಳ್ಳುವುದಕ್ಕಾಗಿ ಸಸೆಕ್ಸ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ತಂಡವು ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲು ನಿರ್ಧರಿಸಿದೆ.

35 ವರ್ಷ ವಯಸ್ಸಿನ ಎಡಗೈ ಬ್ಯಾಟರ್‌ ಹ್ಯೂಸ್‌‍ ಅವರು ಮುಂದಿನ ಋತುವಿನಲ್ಲಿ ಕೌಂಟಿ ಕ್ರಿಕೆಟ್‌ನ ಎಲ್ಲಾ ಚಾಂಪಿಯನ್‌ಷಿಪ್‌ ಮತ್ತು ಟಿ20 ವಿಟಾಲಿಟಿ ಬ್ಲಾಸ್ಟ್‌ ಪಂದ್ಯಗಳಿಗೆ ಲಭ್ಯವಿರುತ್ತಾರೆ. ವೆಸ್ಟ್‌ ಇಂಡೀಸ್‌‍ ಬಲಗೈ ವೇಗದ ಬೌಲರ್‌ ಜೇಡನ್‌ ಸೇಲ್ಸ್‌‍ ಅವರೂ ಚಾಂಪಿಯನ್‌ಷಿಪ್‌ ಪಂದ್ಯಗಳ ಮೊದಲ ಬ್ಲಾಕ್‌ ಅನ್ನು ಆಡಲಿದ್ದಾರೆ ಎಂದು ಕ್ಲಬ್‌ ತಿಳಿಸಿದೆ.

ಪೂಜಾರ 2024ರಲ್ಲಿ ಸತತ ಮೂರನೇ ಬಾರಿಗೆ ಸಸೆಕ್ಸ್‌ ತಂಡಕ್ಕೆ ಮರಳಿದ್ದರು. ಹ್ಯೂಸ್‌‍ ತಂಡಕ್ಕೆ ಬರುವ ಮೊದಲು ಅವರು ಮೊದಲ ಏಳು ಚಾಂಪಿಯನ್‌ಷಿಪ್‌ ಪಂದ್ಯಗಳನ್ನು ಆಡಿದ್ದರು. ಹ್ಯೂಸ್‌‍ ಈ ವರ್ಷದ ಬ್ಲಾಸ್ಟ್‌ನ ಗುಂಪು ಹಂತಗಳಲ್ಲಿ ಐದು ಅರ್ಧಶತಕಗಳು ಸೇರಿದಂತೆ 43.07 ಸರಾಸರಿಯಲ್ಲಿ 560 ರನ್‌ ಗಳಿಸಿ ಗಮನ ಸೆಳೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT