ಲಂಡನ್: ಆಂಡ್ರ್ಯೂ ಸೈಮಂಡ್ಸ್ ಸಾವಿನ ಕುರಿತು ಅವರ ಸೋದರಿ ನೀಡಿರುವ ಹೇಳಿಕೆ ಸದ್ಯ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.

‘ಆ ಹೋತ್ತಿನಲ್ಲಿ, ಅಂಥ ನಿರ್ಜನ ಪ್ರದೇಶದಲ್ಲಿ ಸೈಮಂಡ್ಸ್ ಏನು ಮಾಡುತ್ತಿದ್ದರು’ ಎಂಬುದು ನಮ್ಮ ಕುಟುಂಬಕ್ಕೆ ಗೊತ್ತಾಗುತ್ತಿಲ್ಲ ಎಂದು ಲೂಯಿ ಸೈಮಂಡ್ಸ್ ಸುದ್ದಿ ಮಾಧ್ಯಮ ‘ಡೈಲಿಮೇಲ್’ಗೆ ಹೇಳಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗಆಂಡ್ರ್ಯೂ ಸೈಮಂಡ್ಸ್ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ.

ಕಳೆದ ಶನಿವಾರ ತಡರಾತ್ರಿ ಹಾರ್ವಿ ರೇಂಜ್ ವ್ಯಾಪ್ತಿಯಲ್ಲಿ ಸೈಮಂಡ್ಸ್ ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಸೈಮಂಡ್ಸ್ ಮೃತಪಟ್ಟಿದ್ದರು. ರಕ್ಷಣಾ ದಳವು ಸ್ಥಳಕ್ಕೆ ಧಾವಿಸಿ ಕೈಗೊಂಡ ಕಾರ್ಯಾಚರಣೆಯು ಫಲ ಕೊಡಲಿಲ್ಲ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ತಿಳಿಸಿದ್ದರು.

‘ಅಪಘಾತ ಭೀಕರವಾಗಿತ್ತು. ಸೈಮಂಡ್ಸ್ ಅಲ್ಲಿ ಏನು ಮಾಡುತ್ತಿದ್ದರು ಎಂಬುದು ನಮಗೆ ತಿಳಿಯುತ್ತಿಲ್ಲ. ನಾವು ಇನ್ನೂ ಒಂದು ದಿನ ಅವರೊಂದಿಗೆ ಕಳೆಯಬೇಕು ಅನಿಸುತ್ತಿದೆ. ಇನ್ನೊಂದು ಫೋನ್ ಕರೆ ಮಾಡಬೇಕೆಂದು ನಾನು ಬಯಸುತ್ತೇನೆ. ನನ್ನ ಹೃದಯ ಒಡೆದುಹೋಗಿದೆ. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಸಹೋದರ’ ಎಂದು ಅವರ ಸೋದರಿ ಲೂಯಿಸ್ ಸೈಮಂಡ್ಸ್ ಹೇಳಿದ್ದಾರೆ.

ಅಪಘಾತದಲ್ಲಿ ಸೈಮಂಡ್ಸ್ ಅವರ ಎರಡು ನಾಯಿಗಳು ಬದುಕುಳಿದಿದ್ದವು. ವರದಿಯ ಪ್ರಕಾರ, ಅಪಘಾತ ನಡೆದ ಕೆಲವೇ ಕ್ಷಣಗಳಲ್ಲಿ ಸ್ಥಳೀಯರಿಬ್ಬರು ಸ್ಥಳಕ್ಕೆ ಧಾವಿಸಿದ್ದರು. ‘ಪಕ್ಕದ ಸೀಟಿನತ್ತ ಸೈಮಂಡ್ಸ್ ಭಾಗಿದ್ದರು. ಕಾರು ಇನ್ನೂ ಚಾಲೂ ಇತ್ತು. ಸಂಗೀತವೂ ಹೊಮ್ಮುತ್ತಿತ್ತು’ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.