ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ವಿಂಡೀಸ್‌ಗೆ ರೋಚಕ ಗೆಲುವು; ಬಾಂಗ್ಲಾಕ್ಕೆ ಹ್ಯಾಟ್ರಿಕ್ ಸೋಲು

Last Updated 29 ಅಕ್ಟೋಬರ್ 2021, 16:29 IST
ಅಕ್ಷರ ಗಾತ್ರ

ಶಾರ್ಜಾ: ಸತತ ಎರಡು ಸೋಲಿನ ನಂತರ ಚೇತರಿಸಿಕೊಂಡ ವೆಸ್ಟ್ ಇಂಡೀಸ್ ತಂಡ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ರೋಚಕ ಜಯ ಸಾಧಿಸಿತು. ಗುಂಪು ಒಂದರ ಹಣಾಹಣಿಯಲ್ಲಿ ಬಾಂಗ್ಲಾದೇಶವನ್ನು ಮೂರು ರನ್‌ಗಳಿಂದ ಮಣಿಸಿದ ಹಾಲಿ ಚಾಂಪಿಯನ್ನರು ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡರು.

143 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಒಂದು ಹಂತದಲ್ಲಿ ಸುಲಭ ಜಯ ಸಾಧಿಸುವತ್ತ ಹೆಜ್ಜೆ ಹಾಕಿತ್ತು. ಆದರೆ ನಂತರ ವೆಸ್ಟ್ ಇಂಡೀಸ್ ಪ್ರಾಬಲ್ಯ ಮೆರೆಯಿತು. ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶದ ಗೆಲುವಿಗೆ 13 ರನ್ ಬೇಕಾಗಿತ್ತು. ಆದರೆ ಆ್ಯಂಡ್ರೆ ರಸೆಲ್ ಬಿಗಿ ದಾಳಿ ನಡೆಸಿ ನಿಯಂತ್ರಿಸಿದರು.

ಕೈ ಹಿಡಿದ ಪೂರನ್
ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೆಯರ್ ಮತ್ತು ಆ್ಯಂಡ್ರೆ ರಸೆಲ್ ಮುಂತಾದ ದಿಗ್ಗಜರ ವೈಫಲ್ಯದಿಂದಾಗಿ ವೆಸ್ಟ್ ಇಂಡೀಸ್ ಕುಸಿತದ ಹಾದಿ ಹಿಡಿದಿತ್ತು. ಈ ಸಂದರ್ಭದಲ್ಲಿ ಕೈ ಹಿಡಿದವರು ನಿಕೋಲಸ್ ಪೂರನ್. 22 ಎಸೆತಗಳಲ್ಲಿ 40 ರನ್ ಗಳಿಸಿದ ಪೂರನ್ ಅವರ ಅಮೋಘ ಆಟದ ಬಲದಿಂದ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಅವರನ್ನು ಎರಡಂಕಿ ಮೊತ್ತ ತಲುಪುವ ಮೊದಲೇ ವಾಪಸ್ ಕಳುಹಿಸಿದ ಬೌಲರ್‌ಗಳು ನಾಯಕ ಮೊಹಮ್ಮದುಲ್ಲ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಮೂರನೇ ಕ್ರಮಾಂಕದ ಬ್ಯಾಟರ್ ರಾಸ್ಟನ್ ಚೇಸ್ ಟ್ವೆಂಟಿ–20 ಪದಾರ್ಪಣೆ ಪ‍ಂದ್ಯದಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಶಿಮ್ರಾನ್ ಹೆಟ್ಮೆಯರ್ ಕೂಡ ಔಟಾದಾಗ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಚೇಸ್ ಜೊತೆಗೂಡಿದ ಕಿರನ್ ಪೊಲಾರ್ಡ್ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಉಳಿದರು.

ನಿಕೋಲಸ್ ಪೂರನ್ ಐದನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟದ ಮೂಲಕ ಆಸರೆಯಾದರು. ಮಾಜಿ ನಾಯಕ ಜೇಸನ್ ಹೋಲ್ಡರ್ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿ ಐದು ಎಸೆಗಳಲ್ಲಿ 15 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT