ಟಿ–20 ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು?

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಅಂತ್ಯವಾದ ಐಸಿಸಿ ಟಿ–20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಎರಡನೇ ಬಾರಿ ಚುಟುಕು ಕ್ರಿಕೆಟ್ ಟ್ರೋಫಿ ಎತ್ತಿ ಹಿಡಿದಿದೆ.
ಈ ವಿಶ್ವಕಪ್ ಗೆಲುವಿನೊಂದಿಗೆ ಎರಡೆರಡು ಬಾರಿ ಟಿ–20 ವಿಶ್ವಕಪ್ ಟ್ರೋಫಿ ಜಯಿಸಿದ ಎರಡನೇ ತಂಡ ಎನ್ನುವ ಶ್ರೇಯ ಇಂಗ್ಲೆಂಡ್ ಪಾಲಾಯಿತು. ಈ ಹಿಂದೆ ವೆಸ್ಟ್ ಇಂಡೀಸ್ ಈ ಸಾಧನೆ ಮಾಡಿತ್ತು.
ಇದನ್ನೂ ಓದಿ: ಸಾರಿ ಬ್ರದರ್... ಇದನ್ನೇ ಕರ್ಮ ಅನ್ನುವುದು: ಅಖ್ತರ್ಗೆ ಶಮಿ ಗುದ್ದು
ಚಾಂಪಿಯನ್ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು?
ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡವು ₹ 13.84 ಕೋಟಿ ನಗದು ಬಹುಮಾನ ಪಡೆದುಕೊಂಡಿತು. ರನ್ನರ್ ಅಪ್ ಪಾಕಿಸ್ತಾನ ತಂಡವು ₹7.4 ಕೋಟಿ ಪಡೆಯಿತು.
ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು?
ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಭಾರತ ₹4.5 ಕೋಟಿ ಬಹುಮಾನ ಪಡೆಯಿತು. ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲೆಂಡ್ ತಂಡಕ್ಕೆ ₹4.19 ಕೋಟಿ ಬಹುಮಾನವಾಗಿ ಲಭಿಸಿತು. ಸೂಪರ್ 12 ರೌಂಡ್ನಲ್ಲಿ ನ್ಯೂಜಿಲೆಂಡ್ಗಿಂತ ಒಂದು ಪಂದ್ಯ ಹೆಚ್ಚು ಗೆದ್ದಿದ್ದಕ್ಕೆ ಭಾರತ ತಂಡಕ್ಕೆ ಹೆಚ್ಚಿನ ನಗದು ಬಹುಮಾನಕ್ಕೆ ಭಾಜನವಾಯ್ತು.
ಇದನ್ನೂ ಓದಿ:T20 World Cup: ಇಂಗ್ಲೆಂಡ್ ತಂಡದ ಎಡಗೈ ವೇಗಿ ಸ್ಯಾಮ್ ಕರನ್ ಶ್ರೇಷ್ಠ ಆಟಗಾರ
ಯಾವ ತಂಡಕ್ಕೆ ಎಷ್ಟು ನಗದು ಬಹುಮಾನ (ರೂಪಾಯಿಗಳಲ್ಲಿ)
ಇಂಗ್ಲೆಂಡ್ – 13.84 ಕೋಟಿ
ಪಾಕಿಸ್ತಾನ – 7.40 ಕೋಟಿ
ಭಾರತ – 4.50 ಕೋಟಿ
ನ್ಯೂಜಿಲೆಂಡ್ – 4.19 ಕೋಟಿ
ಆಸ್ಟ್ರೇಲಿಯಾ – 1.53 ಕೋಟ
ದಕ್ಷಿಣ ಅಫ್ರಿಕಾ – 1.20 ಕೋಟಿ
ಬಾಂಗ್ಲಾದೇಶ – 1.20 ಕೋಟಿ
ಶ್ರೀಲಂಕಾ – 1.85 ಕೋಟಿ
ವೆಸ್ಟ್ ಇಂಡೀಸ್ – 64.40 ಲಕ್ಷ
ಅಫ್ಘಾನಿಸ್ತಾನ– 56.35 ಲಕ್ಷ
ಜಿಂಬಾಬ್ವೆ– 88.50 ಲಕ್ಷ
ಐರ್ಲೆಂಡ್ – 1.53 ಕೋಟಿ
ಯುಎಇ – 64.40 ಲಕ್ಷ
ಸ್ಕಾಟ್ಲೆಂಡ್ – 64.40 ಲಕ್ಷ
ನಮೀಬಿಯಾ – 64.40 ಲಕ್ಷ
ನೆದರ್ಲ್ಯಾಂಡ್ – 1.85 ಕೋಟಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.