ಶನಿವಾರ, ಡಿಸೆಂಬರ್ 3, 2022
28 °C

ಟಿ20 ಕ್ರಿಕೆಟ್ ಪಂದ್ಯದಲ್ಲಿ ದಾಖಲೆಯ 501 ರನ್!

ಪಿಟಿಐ Updated:

ಅಕ್ಷರ ಗಾತ್ರ : | |

ಪಾಚೆಫ್‌ಸ್ಟ್ರೂಮ್: ದಕ್ಷಿಣ ಆಫ್ರಿಕಾ ದೇಶೀಯ ಟಿ20 ಟೂರ್ನಿಯಲ್ಲಿ ಟೈಟನ್ಸ್‌ ಮತ್ತು ನೈಟ್ಸ್‌ ತಂಡಗಳ ನಡುವಣ ಸೋಮವಾರ ನಡೆದ ಪಂದ್ಯದಲ್ಲಿ ದಾಖಲೆಯ 501 ರನ್‌ ಹರಿದುಬಂದಿದೆ.

ಮೊದಲು ಬ್ಯಾಟ್‌ ಮಾಡಿದ ಟೈಟನ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 271 ರನ್‌ ಗಳಿಸಿತು. ಡೆವಾಲ್ಡ್‌ ಬ್ರೆವಿಸ್ 57 ಎಸೆತಗಳಲ್ಲಿ 162 ರನ್‌ ಗಳಿಸಿದರು. ನೈಟ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 230 ರನ್‌ ಪೇರಿಸಿ, 41 ರನ್‌ಗಳಿಂದ ಸೋತಿತು.

ನ್ಯೂಜಿಲೆಂಡ್‌ ದೇಶೀಯ ಟಿ20 ಲೀಗ್‌ನಲ್ಲಿ 2016–17ರ ಋತುವಿನಲ್ಲಿ ಸೆಂಟ್ರಲ್‌ ಡಿಸ್ಟ್ರಿಕ್ಟ್ಸ್‌ ಮತ್ತು ಒಟಾಗೊ ನಡುವಣ ಪಂದ್ಯದಲ್ಲಿ 497 ರನ್‌ಗಳು ಬಂದದ್ದು ಇದುವರೆಗಿನ ದಾಖಲೆಯಾಗಿತ್ತು.

ಟೈಟನ್ಸ್‌ ತಂಡದ 271 ರನ್‌, ಟಿ20ನಲ್ಲಿ ದಾಖಲಾದ ನಾಲ್ಕನೇ ಅತಿದೊಡ್ಡ ಮೊತ್ತ ಹಾಗೂ ದಕ್ಷಿಣ ಆಫ್ರಿಕಾದ ತಂಡವೊಂದು ಗಳಿಸಿದ ಅತ್ಯಧಿಕ ಸ್ಕೋರ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು