ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹ್ಯಾಟ್ರಿಕ್' ಸೇರಿದಂತೆ ಸತತ 4 ವಿಕೆಟ್; ಐರ್ಲೆಂಡ್‌ನ ಕ್ಯಾಂಪರ್ ವಿಶ್ವ ದಾಖಲೆ

Last Updated 18 ಅಕ್ಟೋಬರ್ 2021, 11:45 IST
ಅಕ್ಷರ ಗಾತ್ರ

ಅಬುಧಾಬಿ: 'ಹ್ಯಾಟ್ರಿಕ್' ಸೇರಿದಂತೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿರುವ ಐರ್ಲೆಂಡ್‌ನ ಕರ್ಟಿಸ್ ಕ್ಯಾಂಪರ್ ವಿಶ್ವ ದಾಖಲೆ ಬರೆದಿದ್ದಾರೆ.

ಈ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ.

ಈ ಹಿಂದೆ ಶ್ರೀಲಂಕಾದ ಲಸಿತ್ ಮಾಲಿಂಗ ಹಾಗೂ ಅಫ್ಗಾನಿಸ್ತಾನದ ರಶೀದ್ ಖಾನ್ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದರು.

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅಬುಧಾಬಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಪರ್, ಈ ಮೈಲಿಗಲ್ಲು ತಲುಪಿದ್ದಾರೆ. ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ಅಲ್ಲದೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಐರ್ಲೆಂಡ್‌ನ ಮೊದಲ ಬೌಲರ್ ಎನಿಸಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 'ಹ್ಯಾಟ್ರಿಕ್' ವಿಕೆಟ್ ಸಾಧಕರು:
1. ಬ್ರೆಟ್ ಲೀ (ಆಸ್ಟ್ರೇಲಿಯಾ)
2. ಜೇಕಬ್ ಒರಮ್ (ನ್ಯೂಜಿಲೆಂಡ್)
3. ಟಿಮ್ ಸೌಥಿ (ನ್ಯೂಜಿಲೆಂಡ್)
4. ತಿಸಾರಾ ಪರೇರಾ (ಶ್ರೀಲಂಕಾ)
5. ಲಸಿತ್ ಮಾಲಿಂಗ (ಶ್ರೀಲಂಕಾ)
6. ಫಾಹೀಂ ಅಶ್ರಫ್ (ಪಾಕಿಸ್ತಾನ)
7. ರಶೀದ್ ಖಾನ್ (ಅಫ್ಗಾನಿಸ್ತಾನ)
8. ಲಸಿತ್ ಮಾಲಿಂಗ (ಶ್ರೀಲಂಕಾ)
9. ಮೊಹಮ್ಮದ್ ಹಸ್ನೈನ್ (ಪಾಕಿಸ್ತಾನ)
10. ಖಾವರ್ ಅಲಿ (ಒಮನ್)
11. ನಾರ್ಮನ್ ವನುವಾ (ಪಪುವಾ ನ್ಯೂಗಿನಿ)
12. ದೀಪಕ್ ಚಾಹರ್ (ಭಾರತ)
13. ಆಸ್ಟನ್ ಅಗರ್ (ಆಸ್ಟ್ರೇಲಿಯಾ)
14. ಅಕಿಲ ಧನಂಜಯ (ಶ್ರೀಲಂಕಾ)
15. ವಾಸೀಮ್ ಅಬ್ಬಾಸ್ (ಮಾಲ್ಟಾ)
16. ಶೆರಾಜ್ ಶೇಖ್ (ಬೆಲ್ಜಿಯಂ)
17. ನಥನ್ ಎಲ್ಲಿಸ್ (ಆಸ್ಟ್ರೇಲಿಯಾ)
18. ಎಲಿಜಾ ಒಟಿನೊ (ಕೀನ್ಯಾ)
19. ಕರ್ಟಿಸ್ ಕ್ಯಾಂಪರ್ (ಐರ್ಲೆಂಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT