T20 WC : ನಜೀಬ್ 73; ಕಿವೀಸ್ ಗೆಲುವಿಗೆ 125 ರನ್ ಗುರಿ ಒಡ್ಡಿದ ಅಫ್ಗನ್

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಅಬುಧಾಬಿಯಲ್ಲಿ ನಡೆಯುತ್ತಿರುವ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ನ್ಯೂಜಿಲೆಂಡ್ ಗೆಲುವಿಗೆ 125 ರನ್‌ಗಳ ಗುರಿ ಒಡ್ಡಿದೆ.
ಈ ಪಂದ್ಯವು ಭಾರತದ ಪಾಲಿಗೂ ಅತಿ ಮಹತ್ವದೆನಿಸಿದೆ. ಅಫ್ಗಾನಿಸ್ತಾನ ಗೆದ್ದರಷ್ಟೇ ಭಾರತಕ್ಕೆ ಉಳಿಗಾಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ನಜೀಬ್ ಉಲ್ಲ ಜದ್ರಾನ್ ಬಿರುಸಿನ ಅರ್ಧಶತಕದ (73) ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು.
Najibullah's sensational knock of 73 comes to an end 👏
A brilliant effort in the deep from Neesham who takes a stunning catch. #T20WorldCup | #NZvAFG | https://t.co/paShoZpj88 pic.twitter.com/BxEsvWi2FT
— T20 World Cup (@T20WorldCup) November 7, 2021
ಅಫ್ಗನ್ ಆರಂಭ ಉತ್ತಮವಾಗಿರಲಿಲ್ಲ. 19 ರನ್ ಗಳಿಸುವಷ್ಟರಲ್ಲಿ ಹಜರತ್ ಉಲ್ಲ ಜಜಾಯ್ (2), ಮೊಹಮ್ಮದ್ ಶಹಜಾದ್ (4) ಹಾಗೂ ರಹಮಾನ್ ಉಲ್ಲ ಗುರ್ಬಜ್ (6) ವಿಕೆಟ್‌ಗಳನ್ನು ಕಳೆದುಕೊಂಡಿತು. ಗುಲ್ಬದಿನ್ ನಯೀಬ್ (15) ಅವರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.
ಆದರೆ ಒಂದೆಡೆ ವಿಕೆಟ್‌ಗಳು ಪತನಗಳೊಳ್ಳುತ್ತಿದ್ದರೂ ಕ್ರೀಸಿನಲ್ಲಿ ನೆಲೆಯೂರಿ ನಿಂತ ನಜೀಬ್ ಉಲ್ಲ ಜದ್ರಾನ್, ಕೌಂಟರ್ ಅಟ್ಯಾಕ್ ಮಾಡಿದರು. ಅಲ್ಲದೆ ನಾಯಕ ಮೊಹಮ್ಮದ್ ನಬಿ ಜೊತೆಗೂಡಿ ತಂಡವನ್ನು ಮುನ್ನಡೆಸಿದರು.
ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ನಜೀಬ್ 33 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. ನಜೀಬ್ ಹಾಗೂ ನಬಿ ಐದನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
New Zealand restrict Afghanistan to 124/8 after a brilliant effort on the field.
Will this score prove to be enough? 🤔 #T20WorldCup | #NZvAFG | https://t.co/paShoZpj88 pic.twitter.com/vmgS3SxjnH
— T20 World Cup (@T20WorldCup) November 7, 2021
ಆದರೆ ಕೊನೆಯ ಹಂತದಲ್ಲಿ ನಜೀಬ್ ಹಾಗೂ ನಬಿ ವಿಕೆಟ್ ನಷ್ಟವಾಗುವುದರೊಂದಿಗೆ ಅಫ್ಗಾನಿಸ್ತಾನ ಹಿನ್ನಡೆ ಅನುಭವಿಸಿತು. 48 ಎಸೆತಗಳನ್ನು ಎದುರಿಸಿದ ನಜೀಬ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು. ನಾಯಕ ನಬಿ 14 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ಕರಿಮ್ ಜನ್ನತ್ 2 ಹಾಗೂ ರಶೀದ್ ಖಾನ್ 3 ರನ್ ಗಳಿಸಿದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮೂರು ಹಾಗೂ ಟಿಮ್ ಸೌಥಿ ಎರಡು ವಿಕೆಟ್ ಕಬಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.