ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

AUS vs ENG: ಟ್ರಾವಿಸ್‌ ಹೆಡ್‌ ಆಟಕ್ಕೆ ಇಂಗ್ಲೆಂಡ್‌ ಕಂಗಾಲು

Published : 20 ಸೆಪ್ಟೆಂಬರ್ 2024, 12:28 IST
Last Updated : 20 ಸೆಪ್ಟೆಂಬರ್ 2024, 12:28 IST
ಫಾಲೋ ಮಾಡಿ
Comments

ನಾಟಿಂಗ್‌ಹ್ಯಾಮ್: ಆರಂಭ ಆಟಗಾರ ಟ್ರಾವಿಸ್‌ ಹೆಡ್‌ ಜೀವನಶ್ರೇಷ್ಠ ಶತಕ (ಔಟಾಗದೇ 154) ಗಳಿಸಿ, ಆಸ್ಟ್ರೇಲಿಯಾ ತಂಡ, ಮೊದಲ ಏಕದಿನ ದಿನ ಪಂದ್ಯದಲ್ಲಿ ಗುರುವಾರ ಇಂಗ್ಲೆಂಡ್ ತಂಡದ ಮೇಲೆ ಏಳು ವಿಕೆಟ್‌ಗಳ ಜಯಪಡೆಯಲು ನೆರವಾದರು. ಇದು ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾಕ್ಕೆ ಸತತ 13ನೇ ಜಯ.

ಇದು ಎಡಗೈ ಬ್ಯಾಟರ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ. ಹತ್ತು ತಿಂಗಳ ಹಿಂದೆ ಭಾರತ ವಿರುದ್ಧ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಗಳಿಸಿದ ಸ್ಮರಣೀಯ ಶತಕದ ಬಳಿಕ ಇದು ಅವರ ಮೊದಲ ಶತಕ ಕೂಡ. ಅವರ ಸೊಗಸಾದ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್‌, 20 ಬೌಂಡರಿಗಳಿದ್ದವು.

ಬೆನ್‌ ಡಕೆಟ್‌ ಅವರ ಬಿರುಸಿನ 95 ರನ್‌ಗಳ (91ಎ, 4x11) ನೆರವಿನಿಂದ ಇಂಗ್ಲೆಂಡ್ 315 ರನ್‌ಗಳ ದೊಡ್ಡ ಮೊತ್ತ ಗಳಿಸಿತ್ತು. ಹೀಗಾಗಿ ಆಸ್ಟ್ರೇಲಿಯಾಕ್ಕೆ ಬಿರುಸಿನ ಇನಿಂಗ್ಸ್ ಅಗತ್ಯವಿತ್ತು. ಅದನ್ನು ಹೆಡ್ ಆಡಿದರು. ಆಸ್ಟ್ರೇಲಿಯಾ ಆರು ಓವರುಗಳಿರುವಂತೆ 3 ವಿಕೆಟ್‌ಗೆ 317 ರನ್ ಬಾರಿಸಿತು.

ಇಂಗ್ಲೆಂಡ್ ಒಂದು ಹಂತದಲ್ಲಿ 32 ಓವರುಗಳಲ್ಲಿ 2 ವಿಕೆಟ್‌ಗೆ 211 ರನ್ ಗಳಿಸಿತ್ತು. ಆದರೆ ಸಾಂದರ್ಭಿಕ ಬೌಲರ್ ಲಾಬುಷೇನ್ 39ಕ್ಕೆ3 ವಿಕೆಟ್‌ ಗಳಿಸಿ ನಾಗಾಲೋಟಕ್ಕೆ ತಡೆಹಾಕಿದ್ದರು. ಇಂಗ್ಲೆಂಡ್‌ನ ಕೊನೆಯ ಏಳು ವಿಕೆಟ್‌ಗಳು 83 ರನ್ನಿಗೆ ಉರುಳಿದವು.

ಪ್ರವಾಸಿ ತಂಡದ ಸೀನಿಯರ್ ಆಟಗಾರರಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅಸೌಖ್ಯದಿಂದ ಆಡಿರಲಿಲ್ಲ.

ಸಂಕ್ಷಿಪ್ತ ಸ್ಕೋರು:

ಇಂಗ್ಲೆಂಡ್: 49.4 ಓವರುಗಳಲ್ಲಿ 315 (ಬೆನ್‌ ಡಕೆಟ್‌ 95, ವಿಲ್‌ ಜಾಕ್ಸ್‌ 62, ಹ್ಯಾರಿ ಬ್ರೂಕ್ 39, ಜಾಕೊಬ್ ಬೆಥೆಲ್ 35; ಆ್ಯಡಂ ಜಂಪಾ 49ಕ್ಕೆ3, ಲಾಬುಷೇನ್ 39ಕ್ಕೆ3, ಹೆಡ್‌ 34ಕ್ಕೆ2);

ಆಸ್ಟ್ರೇಲಿಯಾ: 44 ಓವರುಗಳಲ್ಲಿ 3 ವಿಕೆಟ್‌ಗೆ 317 (ಟ್ರಾವಿಸ್‌ ಹೆಡ್‌ ಔಟಾಗದೇ 154, ಸ್ಟೀವನ್ ಸ್ಮಿತ್ 32, ಕ್ಯಾಮರಾನ್ ಗ್ರೀನ್ 32, ಲಾಬುಷೇನ್ ಔಟಾಗದೇ 77)

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT