ಬುಧವಾರ, ಜನವರಿ 20, 2021
29 °C

ಕಲ್ಲಿದ್ದಲು ಗಣಿಗಾರಿಕೆ ವಿರೋಧಿಸಿ ಕ್ರೀಡಾಂಗಣಕ್ಕೆ ನುಗ್ಗಿದ ಪ್ರತಿಭಟನಾಕಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ : ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಪಂದ್ಯದ ವೇಳೆ ಇಬ್ಬರು ಪ್ರತಿಭಟನಾಕಾರರು ಕ್ರೀಡಾಂಗಣಕ್ಕೆ ನುಗ್ಗಿದ ಘಟನೆ ಶುಕ್ರವಾರ ನಡೆಯಿತು. 

ಭಾರತದ ಅದಾನಿ ಸಮೂಹವು ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುವುದನ್ನು ವಿರೋಧಿಸಿ ಅವರು ಪ್ರತಿಭಟಿಸಿದರು.

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್‌ ನಡೆದಿದ್ದ ಸಂದರ್ಭದಲ್ಲಿ ಭಾರತದ ಬೌಲರ್ ನವದೀಪ್ ಸೈನಿ ಅವರು ಆರನೇ ಓವರ್ ಬೌಲಿಂಗ್ ಆರಂಭಿಸಲು  ಸಿದ್ಧರಾಗುತ್ತಿದ್ದರು. ಅವರು ರನ್‌ ಅಪ್ ತೆಗೆದುಕೊಳ್ಳುವ ಮುನ್ನವೇ ಇಬ್ಬರು ಪ್ರತಿಭಟನಾಕಾರರು ಗಣಿಗಾರಿಕೆ ವಿರೋಧಿ ಘೋಷಣೆಗಳನ್ನು ಕೂಗುತ್ತ, ಕೈಯಲ್ಲಿ ಪ್ಲೆಕಾರ್ಡ್‌ಗಳನ್ನು ಹಿಡಿದುಕೊಂಡು ಪಿಚ್‌ನತ್ತ ನುಗ್ಗಿದರು.

ಅವರನ್ನು ತಡೆದ ಭದ್ರತಾ ಸಿಬ್ಬಂದಿಯು ಅವರಿಬ್ಬರನ್ನು ವಶಕ್ಕೆ ಪಡೆದು, ಕ್ರೀಡಾಂಗಣದ ಹೊರಗೆ ಕರೆದೊಯ್ದರು.

ಕೋವಿಡ್ ಕಾಲದ ಮೊದಲ ಅಂತರರಾಷ್ಟ್ರೀಯ ಸರಣಿಯನ್ನು ಆಸ್ಟ್ರೇಲಿಯಾ ಆಯೋಜಿಸಿದೆ. ಭಾರತ ತಂಡಕ್ಕೂ ಇದು ಮೊದಲ ದ್ವಿಪಕ್ಷೀಯ ಸರಣಿಯಾಗಿದೆ.

ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯ ಶೇಕಡಾ 50ರಷ್ಟು ಆಸನಗಳನ್ನು ಭರ್ತಿ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ಪಡೆದುಕೊಂಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು