ಗುರುವಾರ , ಮೇ 26, 2022
23 °C
19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಯಶ್ ಅರ್ಧಶತಕ, ರಾಜ್ಯವರ್ಧನ್ ಆಲ್‌ರೌಂಡ್ ಆಟ

19 ವರ್ಷದೊಳಗಿನವರ ಏಷ್ಯಾ ಕಪ್ | ಹರ್ನೂರ್ ಸಿಂಗ್ ಶತಕ: ಭಾರತ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಹರ್ನೂರ್ ಸಿಂಗ್ ಗಳಿಸಿದ ಭರ್ಜರಿ ಶತಕದ ಬಲದಿಂದ ಭಾರತ ಯುವ ತಂಡವು ಗುರುವಾರ ಇಲ್ಲಿ ಆರಂಭವಾದ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 

ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 154 ರನ್‌ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌  ವಿರುದ್ಧ ಗೆದ್ದಿತು. 

ಟಾಸ್ ಗೆದ್ದ ಯುಎಇ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಹರ್ನೂರ್ ಸಿಂಗ್ (120; 130ಎ, 11ಬೌಂಡರಿ) ಶತಕದ ಬಲದಿಂದ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 282 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಯುಎಇ 34.3 ಓವರ್‌ಗಳಲ್ಲಿ 128 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಭಾರತ ತಂಡದ ರಾಜ್ಯವರ್ಧನ್ ಹಂಗರ್ಗೆಕರ್ (24ಕ್ಕೆ3) ಅವರ ಬೌಲಿಂಗ್ ಮುಂದೆ ಯುಎಇ ತತ್ತರಿಸಿತು. 

ಭಾರತ ತಂಡವು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ಹರ್ನೂರ್ ಸಿಂಗ್ ಮತ್ತು ರಶೀದ್ (35; 60ಎ) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 90 ರನ್ ಗಳಿಸಿತು. ರಶೀದ್ ಔಟಾದ ನಂತರ ಹರ್ನೂರ್ ಜೊತೆಗೂಡಿದ ನಾಯಕ ಯಶ್ ಧುಳ್ (63; 68ಎ, 4X4) ಮೂರನೇ ವಿಕೆಟ್ ಜೊತೆಯಾಟದಲ್ಲಿ 120 ರನ್‌ ಸೇರಿಸಿದರು. 

ಇನಿಂಗ್ಸ್‌ನ ಕೊನೆಯಲ್ಲಿ ಮಿಂಚಿದ ರಾಜ್ಯವರ್ಧನ್ (ಔಟಾಗದೆ 48; 23ಎ, 4X6, 6X2) ಅಬ್ಬರದ ಬ್ಯಾಟಿಂಗ್ ಮಾಡಿದರು. ಅವರು ಬೌಲಿಂಗ್‌ನಲ್ಲಿಯೂ ಮಿಂಚಿದರು. 

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5ಕ್ಕೆ282 (ಹರ್ನೂರ್ ಸಿಂಗ್ 120, ಶೇಖ್ ರಶೀದ್ 35, ಯಶ್ ಧುಳ್ 63, ರಾಜವರ್ಧನ್ ಹಂಗರ್ಗೆಕರ್ ಔಟಾಗದೆ 48, ಆಲಿಶಾನ್ ಶರಾಫು 44ಕ್ಕೆ2) ಯುಎಇ: 34.3 ಓವರ್‌ಗಳಲ್ಲಿ 128 (ಕೈ ಸ್ಮಿತ್ 45, ಸೂರ್ಯ ಸತೀಶ್ 21, ರಾಜ್ಯವರ್ಧನ್ ಹಂಗರ್ಗೆಕರ್ 24ಕ್ಕೆ3, ಗರ್ವ್ ಸಂಗ್ವಾನ್ 39ಕ್ಕೆ2, ವಿಕಿ ಓಸ್ವಾಲ್ 7ಕ್ಕೆ2, ಖುಶಾಲ್ ತಾಂಬೆ 16ಕ್ಕೆ2) ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 154 ರನ್‌ಗಳ ಜಯ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು