ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ವಿಶ್ವಕಪ್ | ಹಲವು ದಾಖಲೆಗಳ ಮೇಲೆ ಯಶಸ್ವಿ, ಬಿಷ್ಣೋಯಿ ಕಣ್ಣು

Last Updated 7 ಫೆಬ್ರುವರಿ 2020, 15:43 IST
ಅಕ್ಷರ ಗಾತ್ರ

ಪೊಷೆಫ್‌ಸ್ಟ್ರೂಮ್‌:ಭಾರತದ 19 ವರ್ಷದೊಳಗಿನವರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ ಹಾಗೂ ಸ್ಪಿನ್ನರ್‌ ರವಿ ಬಿಷ್ಣೋಯಿ, ಫೈನಲ್‌ ಪಂದ್ಯದಲ್ಲಿಹಲವು ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು (312) ರನ್‌ ಗಳಿಸಿರುವ ಜೈಸ್ವಾಲ್‌, ಫೈನಲ್‌ ಪಂದ್ಯದಲ್ಲಿ ಇನ್ನು 38 ರನ್‌ ಗಳಿಸಿದರೆ ಯುವ ವಿಶ್ವಕಪ್‌ನ ಒಂದೇ ಟೂರ್ನಿಯಲ್ಲಿ ಭಾರತ ಪರ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಸದ್ಯ ಭಾರತ ಪರ ಒಂದೇ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿರುವುದು ಆಟಗಾರ ಶಿಖರ್ ಧವನ್‌. ಅವರು 2004ರಲ್ಲಿ 505 ರನ್‌ ಗಳಿಸಿದ್ದರು. 2006ರಲ್ಲಿ 349 ರನ್‌ ಗಳಿಸಿರುವ ಚೇತೇಶ್ವರ ಪೂಜಾರ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಸಿಕ್ಸರ್‌ ದಾಖಲೆ
ಸದ್ಯ ಐದು ಪಂದ್ಯಗಳಿಂದ 9 ಸಿಕ್ಸರ್ ಸಿಡಿಸಿರುವ ಜೈಸ್ವಾಲ್‌, 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರ ಎನಿಸಿಕೊಳ್ಳಲು 7 ಸಿಕ್ಸರ್‌ ಬೇಕಿದೆ. 2016 ಟೂರ್ನಿಯಲ್ಲಿ 15ಸಿಕ್ಸರ್‌ ಸಿಡಿಸಿದ್ದ ಇಂಗ್ಲೆಂಡ್‌ನ ಜಾಕ್‌ ಬರ್ನ್‌ಹ್ಯಾಮ್‌ ಮೊದಲ ಸ್ಥಾನದಲ್ಲಿದ್ದಾರೆ. 2014ರಲ್ಲಿ 12 ಸಿಕ್ಸರ್‌ ಸಿಡಿಸಿರುವ ಭಾರತದ ಸಂಜು ಸ್ಯಾಮ್ಸನ್‌ ಭಾರತ ಪರ ಮೊದಲ ಸ್ಥಾನದಲ್ಲಿದ್ದಾರೆ.

ಜಿಂಬಾಬ್ವೆಯ ತಡಿವಾನಶೆ ಮರುಮಾನಿ ಅವರೂ ಈ ಬಾರಿ 9 ಸಿಕ್ಸರ್‌ ಸಿಡಿಸಿದ್ದಾರೆ.

ಅರ್ಧಶತಕದ ದಾಖಲೆ
ಈ ಬಾರಿ ನಾಲ್ಕು ಸಲ50ಕ್ಕಿಂತ ಹೆಚ್ಚು ರನ್‌ ಗಳಿಸಿರುವ ಜೈಸ್ವಾಲ್‌, ಇನ್ನೊಂದು ಅರ್ಧಶತಕ ಗಳಿಸಿದರೆ ಹೆಚ್ಚು ಬಾರಿ 50ಕ್ಕಿಂತ ಅಧಿಕರನ್‌ ಗಳಿಸಿದ ಪಟ್ಟಿ ಸೇರಿಕೊಳ್ಳಲಿದ್ದಾರೆ.1988ರಲ್ಲಿ ಆಸ್ಟ್ರೇಲಿಯಾದ ಬ್ರೆಟ್‌ ವಿಲಿಯಮ್ಸ್‌ ಮತ್ತು 2016ರಲ್ಲಿ ಭಾರತದ ಸರ್ಫರಾಜ್‌ ಖಾನ್‌ ತಲಾ ಐದು ಬಾರಿ 50ಕ್ಕಿಂತ ಹೆಚ್ಚು ರನ್‌ಗಳಿಸಿದ್ದಾರೆ.

ಈ ಬಾರಿ ಜೈಸ್ವಾಲ್‌ಶ್ರೀಲಂಕಾ ವಿರುದ್ಧ 59, ಜಪಾನ್‌ ವಿರುದ್ಧ ಅಜೇಯ 29, ನ್ಯೂಜಿಲೆಂಡ್‌ ವಿರುದ್ಧ ಅಜೇಯ 57, ಆಸ್ಟ್ರೇಲಿಯಾ ವಿರುದ್ಧ 62 ಮತ್ತು ಪಾಕಿಸ್ತಾನ ವಿರುದ್ಧ ಅಜೇಯ 105 ರನ್‌ ಗಳಿಸಿದ್ದಾರೆ.

ಈ ಬಾರಿ ಹೆಚ್ಚು ವಿಕೆಟ್‌
ಸದ್ಯ ಆಡಿರುವ ಐದು ಪಂದ್ಯಗಳಿಂದ 13 ವಿಕೆಟ್‌ ಉರುಳಿಸಿರುವ ಮಣಿಕಟ್ಟಿನ ಸ್ಪಿನ್ನರ್‌ ರವಿ ಬಿಷ್ಣೋಯಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಅಫ್ಗಾನಿಸ್ಥಾನ ತಂಡದ ಶಫಿವುಲ್ಲಾ ಗಫಾರಿ ಹಾಗೂ ಕೆನಡಾದ ಅಖಿಲ್‌ ಕುಮಾರ್‌ ತಲಾ 16 ವಿಕೆಟ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಮೊದಲ ಸ್ಥಾನಕ್ಕೇರಲು ಬಿಷ್ಣೋಯಿಗೆ ಮೂರು ವಿಕೆಟ್ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT