ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾಕ್ಕೆ ಜಯ, ಸರಣಿ ವಶ

Published 9 ಮಾರ್ಚ್ 2024, 18:42 IST
Last Updated 9 ಮಾರ್ಚ್ 2024, 18:42 IST
ಅಕ್ಷರ ಗಾತ್ರ

ಸಿಲ್ಹೆಟ್ (ಬಾಂಗ್ಲಾದೇಶ): ಕುಶಲ್ ಮೆಂಡಿಸ್‌ ಅವರ ಅಮೋಘ ಆಟ (86, 55ಎ, 4x6, 6x6) ಮತ್ತು ವೇಗಿ ನುವಾನ್ ತುಷಾರ ಅವರ ‘ಹ್ಯಾಟ್ರಿಕ್‌’ ಸೇರಿ ಐದು ವಿಕೆಟ್‌ ಗೊಂಚಲಿನ ನೆರವಿನಿಂದ ಶ್ರೀಲಂಕಾ ತಂಡ, ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡವನ್ನು 28 ರನ್‌ಗಳಿಂದ ಸೋಲಿಸಿತು.

ಸರಣಿ 2–1 ರಿಂದ ಶ್ರೀಲಂಕಾ ಪಾಲಾಯಿತು.

ಸ್ಕೋರುಗಳು: ಶ್ರೀಲಂಕಾ: 20 ಓವರುಗಳಲ್ಲಿ 7 ವಿಕೆಟ್‌ಗೆ 174 (ಕುಶಲ್ ಮೆಂಡಿಸ್‌ 86; ತಸ್ಕಿನ್ ಅಹ್ಮದ್ 25ಕ್ಕೆ2, ರಿಶದ್ ಹುಸೇನ್ 35ಕ್ಕೆ2); ಬಾಂಗ್ಲಾದೇಶ: 19.4 ಓವರುಗಳಲ್ಲಿ 146 (ರಿಶದ್ ಹುಸೇನ್ 53, ತಸ್ಕಿನ್ ಅಹ್ಮದ್ 31; ತುಷಾರ 20ಕ್ಕೆ5, ವನೀಂದು ಹಸರಂಗ 32ಕ್ಕೆ2).

ಸರಣಿಯಲ್ಲಿ ಮೊದಲ ಬಾರಿ ಆಡಿದ ತುಷಾರ, ಮೊದಲ ಓವರ್‌ನ ಎರಡು, ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ನಾಯಕ ನೈಜ್ಮುಲ್ ಹುಸೇನ್‌, ತೌಹಿಕ್ ಹೃದಯ್ ಮತ್ತು ಮಹಮದುಲ್ಲಾ ರಿಯಾದ್ ಅವರ ವಿಕೆಟ್‌ಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT