ಬುಧವಾರ, ಮೇ 25, 2022
28 °C

ಕೊಹ್ಲಿ ಟ್ರೋಲ್‌: ರಾಷ್ಟ್ರಗೀತೆ ಹಾಡುವಾಗ 'ವಿರಾಟ್‌' ವರ್ತನೆ ಟೀಕಿಸಿದ ನೆಟ್ಟಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡ ಕಳಪೆ ಪ್ರದರ್ಶನ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ತುತ್ತಾಗಿರುವ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಸೋತರೆ, ಏಕದಿನ ಸರಣಿಯನ್ನು ಹೀನಾಯವಾಗಿ ಸೋತು ವೈಟ್​ವಾಷ್​ ಮುಖಭಂಗಕ್ಕೆ ಒಳಗಾಯಿತು. ಇದರಿಂದ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ರೋಹಿತ್ ಶರ್ಮಾ ಅಲಭ್ಯತೆ, ನಾಯಕನ ಬದಲಾವಣೆ ಟೀಂ ಇಂಡಿಯಾದಲ್ಲಿ ಪರಿಣಾಮ ಬೀರಿದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತ ಮಾಜಿ ನಾಯಕ ವಿರಾಟ್ ಕೊಹ್ಲಿ, ಹರಿಣಗಳ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ’ರಾಷ್ಟ್ರಗೀತೆ ಹಾಡುವಾಗ’ ಅವರ ವರ್ತನೆ ಸರಿ ಇರಲಿಲ್ಲ ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. 

ಪಂದ್ಯಾವಳಿ ಆರಂಭಕ್ಕೂ ಮುನ್ನ ಉಭಯ ತಂಡಗಳು ತಮ್ಮ ದೇಶಗಳ ರಾಷ್ಟಗೀತೆ ಹಾಡುವುದು ವಾಡಿಕೆ. ಅದರಂತೆ ಭಾರತದ ರಾಷ್ಟ್ರಗೀತೆ ಹಾಡುವಾಗ ಭಾರತ ತಂಡದ ಎಲ್ಲ ಆಟಗಾರರು ಹಾಗೂ ಕೋಚ್, ಸಿಬ್ಬಂದಿಗಳು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ರಾಷ್ಟ್ರಗೀತೆ ಹೇಳುವ ಬದಲು ’ಚ್ಯೂಯಿಂಗ್‌ ಗಮ್‌’ ಜಗಿಯುತ್ತಾ ನಿಂತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ವಿಡಿಯೊವನ್ನು ಟ್ರೋಲ್‌ ಮಾಡಿರುವ ನೆಟ್ಟಿಗರು ಕೊಹ್ಲಿಗೆ ದೇಶದ ಬಗ್ಗೆ ಗೌರವವಿಲ್ಲ, ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಅವರು ದುರ್ವತನೆ ತೋರಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಇನ್ನು ಕೆಲವರು ರಾಷ್ಟ್ರಗೀತೆ ವೇಳೆ ’ಚ್ಯೂಯಿಂಗ್‌ ಗಮ್‌’ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ ಎಂದು ಹೇಳಿ ಅನೇಕರು ಕಾಲೆಳೆದಿದ್ದಾರೆ. 

ಇದನ್ನೂ ಓದಿ: ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ವಮಿಕಾ; ನಿಲುವಲ್ಲಿ ಬದಲಾವಣೆಯಿಲ್ಲ ಎಂದ ಕೊಹ್ಲಿ

ಕೊಹ್ಲಿ ಅವರ ಈ ವಿಡಿಯೊ ಇಂಟರ್ನೆಟ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಅವರ ವರ್ತನೆ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಕೊಹ್ಲಿ ಇನ್ನೆರಡು ವರ್ಷ ಟೆಸ್ಟ್ ತಂಡದ ನಾಯಕರಾಗಿರಬೇಕಿತ್ತು: ಶಾಸ್ತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು