ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಭಿಮಾನಿಗಳ ದೊಡ್ಡ ಪಡೆಯೇ ಇದೆ. ಇದೀಗ ಆಸ್ಟ್ರೇಲಿಯಾಕ್ರಿಕೆಟಿಗನ ಪುತ್ರಿ ಕೂಡ ವಿರಾಟ್ ಅಭಿಮಾನಿಯಾಗಿದ್ದಾರೆ.

ಚೆಂಡು ವಿರೂಪಗೊಳಿಸಿದ ಹಗರಣದಲ್ಲಿ ನಿಷೇಧಗೊಂಡು ಒಂದು ವರ್ಷದ ನಂತರ ಕ್ರಿಕೆಟ್‌ಗೆ ಹಿಂತಿರುಗಿರುವ ವಾರ್ನರ್ ಒಳ್ಳೆ ಫಾರ್ಮ್‌ನಲ್ಲಿದ್ದಾರೆ. ಆದರೆ ವಿರಾಟ್ ಕೊಹ್ಲಿಯೇ ಟಾಕ್ ಆಫ್ ದ ಟಾಪಿಕ್. ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳಲ್ಲದೆಯೇ ಡೇವಿಡ್ ವಾರ್ನರ್ ಪುತ್ರಿ ಕೂಡ ಕೊಹ್ಲಿಗೆ ಫಿದಾ ಆಗಿದ್ದಾರೆ.

ವಾರ್ನರ್ ಪತ್ನಿ ಕ್ಯಾಂಡಿಕ್ ವಾರ್ನರ್ ಶೇರ್ ಮಾಡಿರುವ ವಿಡಿಯೊದಲ್ಲಿ, ವಾರ್ನರ್‌ರ ಮಗು ಐವಿ ಮಾ ಬ್ಯಾಟಿಂಗ್ ಮಾಡುತ್ತಾ ನಿರಂತರವಾಗಿ 'ಐ ಆ್ಯಮ್ ವಿರಾಟ್ ಕೊಹ್ಲಿ' ಎಂದು ಹೇಳಿದೆ.

ಈ ಪುಟ್ಟ ಹುಡುಗಿ ಭಾರತದಲ್ಲಿ ಹೆಚ್ಚು ಸಮಯ ಕಳೆದಿದ್ದಾಳೆ. ಈಕೆಯು ವಿರಾಟ್ ಕೊಹ್ಲಿ ಆಗಲು ಬಯಸುತ್ತಾಳೆ ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.