ಶುಕ್ರವಾರ, ಏಪ್ರಿಲ್ 16, 2021
21 °C

IND vs ENG: ಮಹಿ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗದೊಂದು ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕರುಗಳ ಪಟ್ಟಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಈ ಸ್ಮರಣೀಯ ದಾಖಲೆಯನ್ನು ಬರೆದರು.

ವಿರಾಟ್ ಕೊಹ್ಲಿ ಈಗ ಎಂಎಸ್ ಧೋನಿ ಜೊತೆಗೆ ಅತಿ ಹೆಚ್ಚು 60 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 35 ಗೆಲುವುಗಳನ್ನು ದಾಖಲಿಸಿದ್ದಾರೆ. ಇದು ಕೂಡಾ ದಾಖಲೆಯಾಗಿದೆ.

 

 

 

ಕಳೆದ ಪಂದ್ಯದಲ್ಲಷ್ಟೇ ಧೋನಿ ಹಿಂದಿಕ್ಕಿದ ವಿರಾಟ್, ತವರು ನೆಲದಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವಕ್ಕೆ ಭಾಜನವಾಗಿದ್ದರು.

ಇದನ್ನೂ ಓದಿ: 

 

ವಿರಾಟ್ ಕೊಹ್ಲಿ vs ಎಂಎಸ್ ಧೋನಿ ಟೆಸ್ಟ್ ಕಪ್ತಾನಗಿರಿ:

ವಿರಾಟ್ ಕೊಹ್ಲಿ : ಪಂದ್ಯ: 60*, ಗೆಲುವು: 35, ಸೋಲು: 14, ಡ್ರಾ: 10,
(ಈ ಪಂದ್ಯದ ಫಲಿತಾಂಶ ಇನ್ನಷ್ಟೇ ದಾಖಲಾಗಬೇಕಿದೆ.)

ಎಂಎಸ್ ಧೋನಿ : ಪಂದ್ಯ: 60, ಗೆಲುವು: 27, ಸೋಲು: 18, ಡ್ರಾ: 15,

ಜೋ ರೂಟ್ 50...
ಏತನ್ಮಧ್ಯೆ ನಾಯಕರಾಗಿ ಇಂಗ್ಲೆಂಡ್ ತಂಡವನ್ನು 50 ಪಂದ್ಯಗಳಲ್ಲಿ ಮುನ್ನಡೆಸಿದ ಗೌರವಕ್ಕೆ ಜೋ ರೂಟ್ ಪಾತ್ರವಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು