ದುಬೈ: ರನ್ ಮೆಶಿನ್ ಖ್ಯಾತಿಯ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ ಮಗದೊಂದು ಮೈಲಿಗಲ್ಲು ಸಾಧಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ, ಏಕದಿನದಲ್ಲಿ ತ್ರಿಶತಕ ಪೂರೈಸಿದ್ದಾರೆ.

ಈ ಪಂದ್ಯವು ಕೊಹ್ಲಿ ಪಾಲಿಗೆ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.

ಆದರೆ ತಮ್ಮ 300ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 11 ರನ್ ಗಳಿಸಿ ಔಟ್ ಆದರು. ಆ ಮೂಲಕ ನಿರಾಸೆ ಮೂಡಿಸಿದರು. ಮ್ಯಾಟ್ ಹೆನ್ರಿ ದಾಳಿಯಲ್ಲಿ ಗ್ಲೆನ್ ಫಿಲಿಪ್ಸ್ ಅದ್ಭುತ್ ಕ್ಯಾಟ್ ಪಡೆದರು.

ಸಹ ಆಟಗಾರರ ಅಭಿನಂದನೆ...

ಟೀಮ್ ಇಂಡಿಯಾದ ಸಹ ಆಟಗಾರರು ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ. ಈ ಸಂಬಂಧ ಬಿಸಿಸಿಐ ವಿಶೇಷ ವಿಡಿಯೊವನ್ನು ಹಂಚಿಕೊಂಡಿದೆ.

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಅವರನ್ನು ಅಭಿನಂದಿಸಿ ಪೋಸ್ಟ್ ಹಂಚಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ಪದಾರ್ಪಣೆ ಮಾಡಿದ್ದರು.

ಪ್ರಸ್ತುತ ಸಾಗುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲೇ ಕೊಹ್ಲಿ ಏಕದಿನದಲ್ಲಿ 14 ಸಾವಿರ ರನ್ ಪೂರೈಸಿದ್ದರು. ಆ ಮೂಲಕ ಏಕದಿನದಲ್ಲಿ ವೇಗದಲ್ಲಿ 14,000 ರನ್ ಗಳಿಸಿದ ಬ್ಯಾಟರ್ ಎನಿಸಿದ್ದರು.
.Champions Trophy | ಹಲವು ದಾಖಲೆಗಳ ಮೇಲೆ ಕಿಂಗ್ ಕೊಹ್ಲಿ ಕಣ್ಣು.Champions Trophy: ವರುಣ್ ಸ್ಪಿನ್ ಮೋಡಿ; ಕಿವೀಸ್ ವಿರುದ್ಧ ಗೆದ್ದ ಭಾರತ ಅಜೇಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.