ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ನಾಳೆ (ಬುಧವಾರ) ಚಾಲನೆ ದೊರಕಲಿದೆ. ಪಾಕಿಸ್ತಾನ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಯಾಗುತ್ತಿದೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಫೆಬ್ರುವರಿ 20ರಂದು ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ವೇಗದ 14,000 ರನ್...

ಏಕದಿನ ಕ್ರಿಕೆಟ್ನಲ್ಲಿ 14,000 ರನ್ ಮೈಲಿಗಲ್ಲು ತಲುಪಲು ಕೊಹ್ಲಿಗಿನ್ನು ಕೇವಲ 37 ರನ್ಗಳ ಅಗತ್ಯವಿದೆ. ಆ ಮೂಲಕ ಏಕದಿನದಲ್ಲಿ ವೇಗದಲ್ಲಿ 14,000 ರನ್ ಗಳಿಸಿದ ಬ್ಯಾಟರ್ ಎನಿಸಲಿದ್ದಾರೆ. ಈವರೆಗೆ 297 ಪಂದ್ಯಗಳನ್ನು ಆಡಿರುವ ಕೊಹ್ಲಿ 13,963 ರನ್ ಪೇರಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಭಾರತದವರೇ ಆದ ಸಚಿನ್ ತೆಂಡೂಲ್ಕರ್ (18,426) ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕರ (14,234) ಮಾತ್ರ ಕೊಹ್ಲಿಗಿಂತ ಮುಂಚೂಣಿಯಲ್ಲಿದ್ದಾರೆ.

ಗೇಲ್ ದಾಖಲೆ ಮುರಿಯುವ ಅವಕಾಶ...

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪೈಕಿ ವೆಸ್ಟ್ಇಂಡೀಸ್ನ ದಿಗ್ಗಜ ಕ್ರಿಸ್ ಗೇಲ್ ಮುಂಚೂಣಿಯಲ್ಲಿದ್ದಾರೆ. ಗೇಲ್ 17 ಇನಿಂಗ್ಸ್ಗಳಲ್ಲಿ ಒಟ್ಟು 791 ರನ್ ಗಳಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ 13 ಪಂದ್ಯಗಳಲ್ಲಿ 529 ರನ್ ಪೇರಿಸಿದ್ದಾರೆ. ಗೇಲ್ ದಾಖಲೆಯನ್ನು ಮುರಿಯಲು 263 ರನ್ಗಳ ಅಗತ್ಯವಿದೆ. ಭಾರತೀಯ ಬ್ಯಾಟರ್ಗಳ ಪೈಕಿ ಶಿಖರ್ ಧವನ್ (701 ರನ್, 10 ಇನಿಂಗ್ಸ್) ಮುಂಚೂಣಿಯಲ್ಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಅರ್ಧಶತಕ...

ಈವರೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಅರ್ಧಶತಕ ಗಳಿಸಿರುವ ಭಾರತದವರೇ ಆದ ರಾಹುಲ್ ದ್ರಾವಿಡ್ (6) ಅವರ ದಾಖಲೆ ಮುರಿಯಲು ಕೊಹ್ಲಿಗಿನ್ನು ಎರಡು ಅರ್ಧಶತಕಗಳ ಅಗತ್ಯವಿದೆ.

ಎರಡನೇ ಸಲ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಅವಕಾಶ...

ವಿರಾಟ್ ಕೊಹ್ಲಿ, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಅಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಬಳಿಕ 2017ರಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲೇ ಭಾರತ ರನ್ನರ್-ಅಪ್ ಎನಿಸಿಕೊಂಡಿತ್ತು. ವೃತ್ತಿ ಜೀವನದ ಉತ್ತುಂಗದಲ್ಲಿರುವ 36 ವರ್ಷದ ವಿರಾಟ್, ಈಗ ಎರಡನೇ ಸಲ ಟ್ರೋಫಿ ಗೆಲ್ಲುವ ಇರಾದೆಯಲ್ಲಿದ್ದಾರೆ.
.Champions Trophy History | ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ದಾಖಲೆಯ ಅಂಕಿಅಂಶ.ICC Champions Trophy: ಎಲ್ಲ ತಂಡಗಳ ಅಂತಿಮ ಬಳಗ, ಪಂದ್ಯಗಳ ವಿವರ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.