ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿದೆ. 8 ವರ್ಷಗಳ ಬಳಿಕ ಆಯೋಜನೆಗೊಳ್ಳುತ್ತಿರುವ ಈ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎಂಟು ತಂಡಗಳು ಸಜ್ಜಾಗಿವೆ.

ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಗಿರುವ ಪಾಕಿಸ್ತಾನ, ಪ್ರಶಸ್ತಿ ಉಳಿಸಿಕೊಳ್ಳಲು ಏಳು ಬಲಿಷ್ಠ ತಂಡಗಳೊಂದಿಗೆ ಸೆಣಸಾಡಬೇಕಿದೆ. ಟೂರ್ನಿಯು ಫೆಬ್ರುವರಿ 19ರಂದು ಆರಂಭವಾಗಲಿದೆ. ಕರಾಜಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯರಿಗೆ ನ್ಯೂಜಿಲೆಂಡ್ ಸವಾಲೊಡ್ಡಲಿದೆ.

ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಂಟು ತಂಡಗಳು ಎರಡು ಗುಂಪುಗಳಾಗಿ ತಲಾ ಮೂರು ಪಂದ್ಯಗಳನ್ನು ಆಡಲಿವೆ. ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ತಂಡಗಳಿಗೆ ಸೆಮಿಫೈನಲ್ ಟಿಕೆಟ್ ಸಿಗಲಿದೆ.

'ಎ' ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಇವೆ. 'ಬಿ' ಬಳಗದಲ್ಲಿ ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

ಸೆಮಿಫೈನಲ್ ಮತ್ತು ಫೈನಲ್ ಸೇರಿ, ಒಟ್ಟು 15 ಪಂದ್ಯಗಳು ನಡೆಯಲಿವೆ.

ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿರುವ ಭಾರತ, ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಉಳಿದಂತೆ, ಪಾಕಿಸ್ತಾನದ ಲಾಹೋರ್ನಲ್ಲಿ ನಾಲ್ಕು, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ತಲಾ ಮೂರು ಪಂದ್ಯಗಳು ನಡೆಯಲಿವೆ.

ಮೊದಲ ಸೆಮಿಫೈನಲ್ ದುಬೈನಲ್ಲಿ (ಮಾರ್ಚ್ 4ರಂದು) ಹಾಗೂ ಎರಡನೇ ಸೆಮಿಫೈನಲ್ ಲಾಹೋರ್ನಲ್ಲಿ (ಮಾರ್ಚ್ 5ರಂದು) ನಿಗದಿಯಾಗಿವೆ. ಮಾರ್ಚ್ 7ರಂದು ನಡೆಯುವ ಫೈನಲ್ಗೆ ಇನ್ನಷ್ಟೇ ಸ್ಥಳ ಅಂತಿಮವಾಗಬೇಕಿದೆ.

ಟೂರ್ನಿಯಲ್ಲಿ ಆಡುವ ಎಲ್ಲ ಎಂಟು ತಂಡಗಳು ಹೀಗಿವೆ.

'ಎ' ಗುಂಪು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ

ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದಾರೆ.

ಪಂದ್ಯಗಳು

ಫೆಬ್ರುವರಿ 20: Vs ಬಾಂಗ್ಲಾದೇಶ (ದುಬೈ)

ಫೆಬ್ರುವರಿ 23: Vs ಪಾಕಿಸ್ತಾನ (ದುಬೈ)

ಮಾರ್ಚ್ 2: Vs ನ್ಯೂಜಿಲೆಂಡ್ (ದುಬೈ)

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಸೌಮ್ಯ ಸರ್ಕಾರ್, ತಂಝಿದ್ ಹಸನ್, ತೌಹಿದ್ ಹೃದೊಯ್, ಮುಷ್ಫಿಕರ್ ರಹೀಮ್, ಮೊಹಮದುಲ್ಲಾ, ಜಾಕೆರ್ ಅಲಿ ಅನಿಕ್, ಮೆಹದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ಪರ್ವೇಜ್ ಹೊಸೈನ್ ಎಮನ್, ನಸುಮ್ ಅಹ್ಮದ್, ತಂಜಿಮ್ ಹಸನ್ ಶಕಿಬ್, ನಹೀದ್ ರಾಣಾ

ಬೌಲಿಂಗ್ ಶೈಲಿಯ ಪರೀಕ್ಷೆಯಲ್ಲಿ ವಿಫಲವಾಗಿರುವ ಮಾಜಿ ನಾಯಕ ಮತ್ತು ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ಪಂದ್ಯಗಳು

ಫೆಬ್ರುವರಿ 20: Vs ಭಾರತ (ದುಬೈ)

ಫೆಬ್ರುವರಿ 24: Vs ನ್ಯೂಜಿಲೆಂಡ್ (ರಾವಲ್ಪಿಂಡಿ)

ಫೆಬ್ರುವರಿ 27: Vs ಪಾಕಿಸ್ತಾನ (ರಾವಲ್ಪಿಂಡಿ)

ನ್ಯೂಜಿಲೆಂಡ್: ಮಿಚೇಲ್ ಸ್ಯಾಂಟ್ನರ್ (ನಾಯಕ), ಮಿಚೇಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೋನ್ ಕಾನ್ವೇ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಡೆರಿಲ್ ಮಿಚೇಲ್, ವಿಲ್ ಓ‘ರೂರ್ಕಿ, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಜೇಕಬ್ ಡಫ್ಫಿ

ಪಂದ್ಯಗಳು

ಫೆಬ್ರುವರಿ 19: Vs ಪಾಕಿಸ್ತಾನ (ಕರಾಚಿ)

ಫೆಬ್ರುವರಿ 24: Vs ಬಾಂಗ್ಲಾದೇಶ (ರಾವಲ್ಪಿಂಡಿ)

ಮಾರ್ಚ್ 2: Vs ಭಾರತ (ದುಬೈ)

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಂ, ಫಖರ್ ಜಮಾನ್, ಕಮ್ರಾನ್ ಘುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ

ಪಂದ್ಯಗಳು

ಫೆಬ್ರುವರಿ 19: Vs ನ್ಯೂಜಿಲೆಂಡ್ (ಕರಾಚಿ)

ಫೆಬ್ರುವರಿ 23: Vs ಭಾರತ (ದುಬೈ)

ಫೆಬ್ರುವರಿ 27: Vs ಬಾಂಗ್ಲಾದೇಶ (ರಾವಲ್ಪಿಂಡಿ)

'ಬಿ' ಗುಂಪು

ಅಫ್ಗಾನಿಸ್ತಾನ: ಹಸ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್, ಸೆದಿಕುಲ್ಲಾ ಅಟಲ್, ರಹಮತ್ ಶಾ, ಇಕ್ರಮ್ ಅಲಿಖಿಲ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಝೈ, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋತಿ, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಫರೀದ್ ಮಲಿಕ್, ನವೀನ್ ಜದ್ರಾನ್ – ಮೀಸಲು ಆಟಗಾರರು: ದರ್ವಿಷ್ ರಸೂಲಿ, ಬಿಲಾಲ್ ಶಮಿ

ಗಾಯದ ಸಮಸ್ಯೆಯಿಂದಾಗಿ ಸ್ಪಿನ್ನರ್ಗಳಾದ ಮುಜೀಬ್ ಉರ್ ರಹಮಾನ್ ಮತ್ತು ಅಲಾ ಘಜ್ನಾಫರ್ ಹೊರಬಿದ್ದಿದ್ದಾರೆ.

ಪಂದ್ಯಗಳು

ಫೆಬ್ರುವರಿ 21: Vs ದಕ್ಷಿಣ ಆಫ್ರಿಕಾ (ಕರಾಚಿ)

ಫೆಬ್ರುವರಿ 26: Vs ಇಂಗ್ಲೆಂಡ್ (ಲಾಹೋರ್)

ಫೆಬ್ರುವರಿ 28: Vs ಆಸ್ಟ್ರೇಲಿಯಾ (ಲಾಹೋರ್)

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬೊಟ್, ಅಲೆಕ್ಸ್ ಕಾರಿ, ಬೆನ್ ಡ್ವಾರ್ಷಿಯಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್ ಮೆಕ್ಗರ್ಕ್, ಆ್ಯರೊನ್ ಹಾರ್ಡೀ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಷೇನ್, ಗ್ಲೆನ್ ಮ್ಯಾಕ್ಸ್ವೆಲ್, ತನ್ವೀರ್ ಸಂಘಾ, ಮ್ಯಾಥ್ಯೂ ಶಾರ್ಟ್, ಆ್ಯಡಮ್ ಜಂಪಾ – ಮೀಸಲು ಆಟಗಾರ: ಕೂಪ್ ಕನ್ನೊಲಿ

ನಾಯಕ ಪ್ಯಾಟ್ ಕಮಿನ್ಸ್, ಅನುಭವಿ ವೇಗಿ ಜೋಶ್ ಹ್ಯಾಜಲ್ವುಡ್ ಅವರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ. ಆಲ್ರೌಂಡರ್ ಮಾರ್ಕಸ್ ಸ್ಟೋಯಿನಸ್ ಟೂರ್ನಿಗೂ ಮುನ್ನ ವಿದಾಯ ಹೇಳಿದ್ದಾರೆ. ಏತನ್ಮಧ್ಯೆ, ಪ್ರಮುಖ ವೇಗಿ ಮಿಚೇಲ್ ಸ್ಟಾರ್ಕ್ ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಭಾರಿ ಹಿನ್ನಡೆ ಅನುಭವಿಸುತ್ತಿರುವ ತಂಡವನ್ನು ಮುನ್ನಡೆಸುವ ಹೊಣೆ ಸ್ಮಿತ್ ಅವರ ಹೆಗಲೇರಿದೆ.

ಪಂದ್ಯಗಳು

ಫೆಬ್ರುವರಿ 22: Vs ಇಂಗ್ಲೆಂಡ್ (ಲಾಹೋರ್)

ಫೆಬ್ರುವರಿ 25: Vs ದಕ್ಷಿಣ ಆಫ್ರಿಕಾ (ರಾವಲ್ಪಿಂಡಿ)

ಫೆಬ್ರುವರಿ 28: Vs ಅಫ್ಗಾನಿಸ್ತಾನ (ಲಾಹೋರ್)

ಇಂಗ್ಲೆಂಡ್: ಜಾಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬಾಂಟನ್, ಹ್ಯಾರಿ ಬ್ರೂಕ್, ಬ್ರೇಯ್ಡನ್ ಕರ್ಸ್, ಬೆನ್ ಡಂಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲೀವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಕೀಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್

2019ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ, ಆಯ್ಕೆಗೆ ಪರಿಗಣಿಸಿಲ್ಲ.

ಪಂದ್ಯಗಳು

ಫೆಬ್ರುವರಿ 22: Vs ಆಸ್ಟ್ರೇಲಿಯಾ (ಲಾಹೋರ್)

ಫೆಬ್ರುವರಿ 26: Vs ಅಫ್ಗಾನಿಸ್ತಾನ (ಲಾಹೋರ್)

ಮಾರ್ಚ್ 1: Vs ದಕ್ಷಿಣ ಆಫ್ರಿಕಾ (ಕರಾಚಿ)

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಟೋನಿ ಡಿ ಜಾರ್ಜಿ, ಮಾರ್ಕೊ ಜಾನ್ಸನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡನ್ ಮರ್ಕ್ರಂ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೇಜ್ ಶಂಸಿ, ಟಿಟ್ಸನ್ ಸ್ಟಬ್ಸ್, ರಸ್ಸೀ ವ್ಯಾನ್ ಡೆರ್ ಡಸ್ಸೆನ್, ಕಾರ್ಬಿನ್ ಬಾಚ್ – ಮೀಸಲು ಆಟಗಾರ: ವೆನಾ ಮಫಾಕ

ಗಾಯಾಳು ಎನ್ರಿಚ್ ನೊಕಿಯ ಅವರ ಅನುಪಸ್ಥಿಯಲ್ಲಿ ಆಫ್ರಿಕನ್ನರು ಕಣಕ್ಕಿಳಿಯಲಿದ್ದಾರೆ.

ಪಂದ್ಯಗಳು

ಫೆಬ್ರುವರಿ 21: Vs ಅಫ್ಗಾನಿಸ್ತಾನ (ಕರಾಚಿ)

ಫೆಬ್ರುವರಿ 25: Vs ಆಸ್ಟ್ರೇಲಿಯಾ (ರಾವಲ್ಪಿಂಡಿ)

ಮಾರ್ಚ್ 1: Vs ಇಂಗ್ಲೆಂಡ್ (ಕರಾಚಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.