IND vs SA: ಶೂನ್ಯಕ್ಕೆ ಔಟ್ ಆದರೂ ಕ್ಯಾರೇ ಅನ್ನದ ವಿರಾಟ್ ಕೊಹ್ಲಿ!

ಪರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿರುವ ವಿರಾಟ್ ಕೊಹ್ಲಿ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ.
ಆದರೆ ಇದಾದ ಸ್ವಲ್ಪ ಹೊತ್ತಿನಲ್ಲೇ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ಕೊಹ್ಲಿ, ಸಹ ಆಟಗಾರರೊಂದಿಗೆ ನಗೆ ಚಟಾಕಿ ಹಾರಿಸುತ್ತಾ ಸಂಭ್ರಮದ ವಾತಾವರಣದಲ್ಲಿ ತೊಡಗಿಸಿಕೊಂಡಿರುವುದು ದೃಶ್ಯಗಳಲ್ಲಿ ಕಂಡುಬಂದಿದ್ದವು.
ಇದನ್ನೂ ಓದಿ: IND vs SA: ರಾಹುಲ್, ಪಂತ್ ಅರ್ಧಶತಕ; ದ.ಆಫ್ರಿಕಾ ಗೆಲುವಿಗೆ 288 ರನ್ ಗುರಿ
Girls after scoring 99/100 in exam: 😭😭😭😭
Boys after scoring 0(5):#SAvIND #ViratKohli #KingKohli #Virat #Kohli pic.twitter.com/6LsWhd243p— Samrat Paul (@SamratPIKU) January 21, 2022
ಏಕದಿನ ಕ್ರಿಕೆಟ್ನಲ್ಲಿ 14ನೇ ಬಾರಿಗೆ ವಿರಾಟ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಈ ಮೂಲಕ ಮಾಜಿ ನಾಯಕ ಕಪಿಲ್ ದೇವ್, ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ (ತಲಾ 13) ಹಿಂದಿಕ್ಕಿರುವ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ ಹಾಗೂ ಜಹೀರ್ ಖಾನ್ ಸಾಲಿಗೆ ಸೇರಿದ್ದಾರೆ.
ಅಲ್ಲದೆ ಏಕದಿನದಲ್ಲಿ ಮೊದಲ ಬಾರಿಗೆ ಸ್ಪಿನ್ನರ್ ದಾಳಿಯಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಅಪಖ್ಯಾತಿಗೊಳಗಾಗಿದ್ದಾರೆ.
ಐದು ಎಸೆತಗಳನ್ನು ಎದುರಿಸಿದ್ದ ಕೊಹ್ಲಿ, ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ದಾಳಿಯಲ್ಲಿ ಔಟ್ ಆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.