ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ: ಪಾಕ್ ಮಾಜಿ ಕ್ರಿಕಟಿಗ

Last Updated 9 ನವೆಂಬರ್ 2021, 16:46 IST
ಅಕ್ಷರ ಗಾತ್ರ

ಕರಾಚಿ: ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ತಂಡದ ನಾಯಕತ್ವ ಬಿಟ್ಟುಕೊಟ್ಟಿರುವುದನ್ನು ನೋಡಿದರೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕಟಿಗ ಮುಷ್ತಾಕ್ ಅಹಮದ್ ಹೇಳಿದ್ದಾರೆ.

’ಒಬ್ಬ ಯಶಸ್ವಿ ನಾಯಕನು ತನ್ನ ಸ್ಥಾನವನ್ನು ಬಿಟ್ಟುಕೊಡುವುದಾಗಿ ಇದ್ದಕ್ಕಿದ್ದಂತೆ ನಿರ್ಧರಿಸಿರುವುದನ್ನು ನೋಡಿದರೆ ಇಂತಹ ಅನುಮಾನ ಕಾಡುತ್ತದೆ. ಭಾರತ ಕ್ರಿಕೆಟ್‌ ತಂಡದ ಡ್ರೆಸಿಂಗ್ ಕೋಣೆಯಲ್ಲಿ ಎರಡು ಗುಂಪುಗಳಿರುವುದು ನನಗೆ ಕಾಣುತ್ತಿದೆ. ಅವು ಮುಂಬೈ ಮತ್ತು ದೆಹಲಿ ಗುಂಪುಗಳಾಗಿವೆ‘ ಎಂದು ಮುಷ್ತಾಕ್ ಹೇಳಿದ್ದಾರೆ.

ಮುಷ್ತಾಕ್ ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ ಪರ್ಫಾಮೆನ್ಸ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

’ಟಿ20 ಕ್ರಿಕೆಟ್‌ನಲ್ಲಿ ಆಡುವುದರಿಂದಲೂ ಕೊಹ್ಲಿ ಶೀಘ್ರವೇ ನಿವೃತ್ತಿ ತೆಗೆದುಕೊಳ್ಳುತ್ತಾರೆಂದು ನನಗನಿಸುತ್ತದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಅವರು ಮುಂದುವರಿಯುವ ಸಾಧ್ಯತೆ ಇದೆ‘ ಎಂದಿದ್ದಾರೆ.

’ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಲು ಐಪಿಎಲ್ ಟೂರ್ನಿಯೇ ಕಾರಣ. ಟೂರ್ನಿಗೂ ಮುನ್ನ ಆಟಗಾರರು ಸುದೀರ್ಘ ಕಾಲದವರೆಗೆ ಬಯೋಬಬಲ್‌ನಲ್ಲಿ ಇದ್ದದ್ದು ಮುಳುವಾಯಿತು. ಮಾನಸಿಕ ಮತ್ತು ದೈಹಿಕವಾಗಿ ಅಪಾರ ದಣಿವು ಅನುಭವಿಸಿದ್ದಾರೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT