ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಕೆ ಪಟೌಡಿ 51 ವರ್ಷ ಹಳೆಯ ನಾಯಕತ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ

Last Updated 18 ಡಿಸೆಂಬರ್ 2020, 2:18 IST
ಅಕ್ಷರ ಗಾತ್ರ

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನಡೆಸಿದ ಟೀಮ್ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದ (74) ನೆರವಿನಿಂದ ಮೊದಲ ದಿನದಾಟದಲ್ಲಿ ಆರು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ.

ಅಡಿಲೇಡ್ ಓವಲ್‌ನಲ್ಲಿ ಅಮೋಘ ಫಾರ್ಮ್ ಮುಂದುವರಿಸಿರುವ ವಿರಾಟ್ ಕೊಹ್ಲಿ, ಭಾರತದ ಮಾಜಿ ನಾಯಕರುಗಳಾದ ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಮಹೇಂದ್ರ ಸಿಂಗ್ ಧೋನಿ ದಾಖಲೆಗಳನ್ನು ಮುರಿದಿದ್ದಾರೆ.

ಭಾರತ ತಂಡದ ಕಪ್ತಾನರಾಗಿ ಆಸ್ಟ್ರೇಲಿಯಾ ವಿರುದ್ದಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನವಾದರು. ಈ ಮೂಲಕ ಎಂಎಸ್‌ಕೆ ಪಟೌಡಿ ಹೆಸರಲ್ಲಿದ್ದ 51 ವರ್ಷ ಹಳೆಯ ನಾಯಕತ್ವ ದಾಖಲೆಯನ್ನು ಮುರಿದರು.

ಭಾರತದ ಮಾಜಿ ಯಶಸ್ವಿ ನಾಯಕರಾಗಿರುವ ಪಟೌಡಿ 10 ಟೆಸ್ಟ್ ಪಂದ್ಯಗಳಲ್ಲಿ 829 ರನ್ ಪೇರಿಸಿದ್ದರು. ಇನ್ನೊಂದೆಡೆ ವಿರಾಟ್ ಕೊಹ್ಲಿ 851 ರನ್ ಗಳಿಸಿದ್ದಾರೆ.

ಧೋನಿ ದಾಖಲೆ ಮುರಿದ ಕೊಹ್ಲಿ...
ಈ ಮಧ್ಯೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡದ ನಾಯಕರಾಗಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ದಾಖಲೆ ಅಳಿಸಿರುವ ವಿರಾಟ್ ಕೊಹ್ಲಿ ಒಟ್ಟು 813 ರನ್ ಪೇರಿಸಿದ್ದಾರೆ.

ಅಜಿಂಕ್ಯ ರಹಾನೆ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರನೌಟ್‌ಗೆ ಸಿಲುಕಿದ ವಿರಾಟ್ ಕೊಹ್ಲಿ 180 ಎಸೆತಗಳಲ್ಲಿ ಎಂಟು ಬೌಂಡರಿಗಳಿಂದ 74 ರನ್ ಗಳಿಸಿದರು. ಈ ಮೂಲಕ ಶತಕ ಗಳಿಸುವ ಅವಕಾಶದಿಂದ ವಂಚಿತವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT