'ಬಾಬರ್ ಅತ್ಯುತ್ತಮ ಆಟಗಾರ'
'ಬಾಬರ್ ಅಜಂ ಅತ್ಯುತ್ತಮ ಆಟಗಾರ. ಪ್ರತಿಯೊಬ್ಬರಿಗೂ ಕಠಿಣ ಪರಿಸ್ಥಿತಿ ಎದುರಾಗುತ್ತದೆ. ಆದರೆ, ರಾಷ್ಟ್ರೀಯ ತಂಡವೇ ಕಳೆದ ಹಲವು ತಿಂಗಳುಗಳಿಂದ ಉತ್ತಮವಾಗಿ ಆಡುತ್ತಿಲ್ಲ' ಎಂದು ಹೇಳಿದ್ದಾರೆ. ಆ ಮೂಲಕ, ಬಾಬರ್ ಬೆನ್ನಿಗೆ ನಿಂತಿದ್ದಾರೆ. 'ತಂಡದ ಆಡಳಿತ ಹಾಗೂ ಆಟಗಾರರ ಮೇಲೆ ನಂಬಿಕೆ ಇಡಿ. ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಒಟ್ಟಾಗಿ ಮುನ್ನಡೆಯಿರಿ' ಎಂದು ಕಿವಿಮಾತು ಹೇಳಿದ್ದಾರೆ.