ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್ ಇಂಡೀಸ್‌ಗೆ ಮುನ್ನಡೆ

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ
Last Updated 13 ಫೆಬ್ರುವರಿ 2021, 16:13 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಖುಷಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ವೆಸ್ಟ್ ಇಂಡೀಸ್‌ ಎರಡನೇ ಇನಿಂಗ್ಸ್‌ನ ಆರಂಭದಲ್ಲಿ ಆಘಾತ ಅನುಭವಿಸಿತು. ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶನಿವಾರ ಮೂರನೇ ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡ ಮೂರು ವಿಕೆಟ್‌ ಕಳೆದುಕೊಂಡು 41 ರನ್‌ ಗಳಿಸಿತ್ತು.

ಎನ್‌ಕುಮ್ರಾ ಬಾನರ್ (8) ಹಾಗೂ ರಾತ್ರಿ ಕಾವಲುಗಾರ ಜೋಮೆಲ್ ವಾರಿಕನ್‌ (2) ಕ್ರೀಸ್‌ನಲ್ಲಿದ್ದರು. ದಿನದಾಟದ ಕೊನೆಗೆ ವೆಸ್ಟ್ ಇಂಡೀಸ್‌ ತಂಡದ ಒಟ್ಟು ಮುನ್ನಡೆ 154 ರನ್‌ಗಳಾಗಿದ್ದವು.

ಇದಕ್ಕೂ ಮೊದಲು ಆತಿಥೇಯ ಬಾಂಗ್ಲಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 296 ರನ್‌ ಗಳಿಸಿ ಸರ್ವಪತನವಾಯಿತು. ಆಫ್‌ಸ್ಪಿನ್ನರ್‌ ರಖೀಮ್ ಕಾರ್ನವಾಲ್‌ (74ಕ್ಕೆ 5) ಬಾಂಗ್ಲಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾನನ್ ಗೇಬ್ರಿಯಲ್‌ (70ಕ್ಕೆ 3) ಹಾಗೂ ಅಲ್ಜರಿ ಜೋಸೆಫ್‌ (60ಕ್ಕೆ 2) ಬೌಲಿಂಗ್‌ನಲ್ಲಿ ಪ್ರಭಾವಿ ಎನಿಸಿದರು.

ಬಾಂಗ್ಲಾ ತಂಡದ ಲಿಟನ್ ದಾಸ್‌ (71) ಹಾಗೂ ಮೆಹದಿ ಹಸನ್‌ (57) ಏಳನೇ ವಿಕೆಟ್‌ ಜೊತೆಯಾಟದಲ್ಲಿ 126 ರನ್ ಸೇರಿಸಿದರು. ಮುಷ್ಫಿಕುರ್‌ ರಹೀಂ (54) ಕೂಡ ಕೊಡುಗೆ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ 409 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್‌: 142.2 ಓವರ್‌ಗಳಲ್ಲಿ 409: ಬಾಂಗ್ಲಾದೇಶ: 96.5 ಓವರ್‌ಗಳಲ್ಲಿ 296 (ಮುಷ್ಫಿಕುರ್ ರಹೀಂ 54, ಲಿಟನ್ ದಾಸ್‌ 71, ಮಹದಿ ಹಸನ್‌ 57; ರಖೀಮ್ ಕಾರ್ನವಾಲ್‌ 74ಕ್ಕೆ 5, ಶಾನ್‌ ಗ್ಯಾಬ್ರಿಯಲ್‌ 70ಕ್ಕೆ 3, ಅಲ್ಜರಿ ಜೋಸೆಫ್‌ 60ಕ್ಕೆ 2). ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್‌: 21 ಓವರ್‌ಗಳಲ್ಲಿ 3ಕ್ಕೆ 41 (ಜಾನ್ ಕ್ಯಾಂಪ್‌ಬೆಲ್‌ 18, ಎನ್‌ಕುಮ್ರಾ ಬಾನರ್ 8; ತೈಜುಲ್ ಇಸ್ಲಾಂ 13ಕ್ಕೆ 1, ನಯೀಂ ಹಸನ್‌ 14ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT