ರಾಯ್ಪುರ್: ಲೆಂಡ್ಲ್ ಸಿಮನ್ಸ್ ಅವರ ಶತಕ ಮತ್ತು ರವಿ ರಾಂಪಾಲ್ ಅವರ ಸೊಗಸಾದ ಬೌಲಿಂಗ್ (ಐದು ವಿಕೆಟ್) ನೆರವಿನಿಂದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ವಿಂಡೀಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು. ತಂಡದ ಆರಂಭಿಕ ಬ್ಯಾಟರ್ ಡ್ವೇನ್ ಸ್ಮಿತ್ (5ರನ್) ಮತ್ತು ಪೆರ್ಕಿನ್ಸ್ (5) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭಿವಿಸಿತು. ನಂತರ ಜೊತೆಗೂಡಿದ ಲೆಂಡ್ಲ್ ಸಿಮನ್ಸ್ ಮತ್ತು ನಾಯಕ ಬ್ರಿಯಾನ್ ಲಾರಾ ಜೊತೆಗೂಡಿ ಮೂರನೇ ವಿಕೆಟ್ಗೆ 125 ರನ್ ಸೇರಿಸಿದರು. ಸಿಮನ್ಸ್ 54 ಎಸೆತಗಳಲ್ಲಿ ಶತಕ ಪೂರೈಸಿದರು. ಲಾರಾ 29, ನರ್ಸ್ 0, ವಲ್ಟನ್ ಔಟಾಗದೇ 38,ಸಿಮನ್ಸ್ 108, ಡಿಯೋ ನರೈನ್ ಔಟಾಗದೇ 1 ರನ್ ಗಳಿಸಿದರು.

ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ತಂಡ ವೇಗಿ ರಾಂಪೌಲ್ ದಾಳಿಗೆ ತತ್ತರಿಸಿತು. ದಕ್ಷಿಣ ಆಫ್ರಿಕಾ ತಂಡದ ರಿಚರ್ಡ್ ಲೆವಿ (35), ನಾಯಕ ಜಾಕಸ್ ಕಲ್ಲಿಸ್ (45), ಜಾಕ್ವೆಸ್ ರೂಡೋಲ್ಫ್(39) ರನ್ ಗಳಿಸಿ ಪೆವಿಲಿಯನ್ ಸೇರಿದರು. ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ವೇಗಿ ರಾಂಪೌಲ್ 26ಕ್ಕೆ 5 ವಿಕೆಟ್ ಪಡೆದು ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.