ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟರ್‌ ಚಾಹರ್‌ ಪ್ರೇಮ ನಿವೇದನೆ ಸ್ವೀಕರಿಸಿದ ಜಯಾ ಭಾರದ್ವಜ್‌ ಯಾರು? 

Last Updated 7 ಅಕ್ಟೋಬರ್ 2021, 16:15 IST
ಅಕ್ಷರ ಗಾತ್ರ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಾಹರ್ ಗುರುವಾರ ಗೆಳತಿ ಜಯಾ ಭಾರದ್ವಾಜ್‌ ಅವರಿಗೆಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೆದುರೇ ಪ್ರೇಮ ನಿವೇದನೆ ಮಾಡಿದರು.

ಜಯಾ ಅವರು ನಟ ಮತ್ತು ಬಿಗ್‌ಬಾಸ್‌ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೆಹಲಿಯವರಾದ ಜಯಾ, ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ವರದಿಗಳ ಪ್ರಕಾರ, ದೀಪಕ್ ಚಾಹರ್‌ ಗೆಳತಿ ಜಯಾ ಅವರನ್ನು ಟೀಂ ಇಂಡಿಯಾದ ಆಟಗಾರರಿಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದೂ ಗೊತ್ತಾಗಿದೆ.

ದೀಪಕ್ ಬಾಲಿವುಡ್ ಮಾಡೆಲ್ ಮತ್ತು ನಟಿ ಮಾಲ್ತಿ ಚಾಹರ್ ಅವರ ತಮ್ಮ. ಕ್ರಿಕೆಟಿಗ ರಾಹುಲ್ ಚಾಹರ್ ಅವರ ಅಣ್ಣ.

ಜಯಾ ನಟ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ಸಿದ್ಧಾರ್ಥ್‌ ಅವರು ಬಿಗ್‌ಬಾಸ್‌ ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT