ಸೋಮವಾರ, ಅಕ್ಟೋಬರ್ 26, 2020
28 °C

ಮದುವೆಗೆ ಭಾರತದ ಆಟಗಾರರನ್ನೂ ಕರೆಯುವೆ: ಅಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರಾಚಿ (ಪಿಟಿಐ): ‘ನನ್ನ ವಿವಾಹ ಸಮಾರಂಭಕ್ಕೆ ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೂ ಆಹ್ವಾನ ನೀಡುತ್ತೇನೆ’ ಎಂದು ಪಾಕಿಸ್ತಾನದ ಕ್ರಿಕೆಟಿಗ ಹಸನ್‌ ಅಲಿ ಹೇಳಿದ್ದಾರೆ.

ಹಸನ್‌ ಅವರು ಆಗಸ್ಟ್‌ 20ರಂದು ದುಬೈಯ ಹೋಟೆಲ್‌ವೊಂದರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ಸಮಿಯಾ ಆರ್ಜೂ ಅವರನ್ನು ವರಿಸಲಿದ್ದಾರೆ.

ಹರಿಯಾಣದ ಸಮಿಯಾ, ಗುರುಗ್ರಾಮದ ಮಾನವ್‌ ರಚನಾ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌. ಪದವಿ ಪಡೆದಿದ್ದಾರೆ. ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯಲ್ಲಿ ಎಂಜಿನಿಯರ್‌ ಆಗಿ ಕೆಲಸಮಾಡುತ್ತಿರುವ ಅವರು ದುಬೈಯಲ್ಲಿ ನೆಲೆಸಿದ್ದಾರೆ. ಅವರ ಕುಟುಂಬದವರು ನವದೆಹಲಿಯಲ್ಲಿ ವಾಸವಿದ್ದಾರೆ. 

‘ಭಾರತ ತಂಡದ ಆಟಗಾರರಿಗೂ ಆಮಂತ್ರಣ ಪತ್ರಿಕೆ ನೀಡುತ್ತೇನೆ. ಕೆಲವರಾದರೂ ಮದುವೆ ಸಮಾರಂಭದಲ್ಲಿ ಭಾಗಿಯಾದರೆ ತುಂಬಾ ಖುಷಿಯಾಗುತ್ತದೆ. ಪಂದ್ಯಗಳ ವೇಳೆ ಮಾತ್ರ ನಾವು ಎದುರಾಳಿಗಳು. ಅಂಗಳದ ಹೊರಗೆ ಎಲ್ಲರೂ ಸ್ನೇಹಿತರಂತೆ ಇರುತ್ತೇವೆ’ ಎಂದು ಅಲಿ ಹೇಳಿದ್ದಾರೆ.

‘ಮದುವೆಯ ವಿಷಯವನ್ನು ರಹಸ್ಯವಾಗಿಡಬೇಕೆಂದು ಎರಡು ಕುಟುಂಬದವರೂ ತೀರ್ಮಾನಿಸಿದ್ದೆವು. ಕೆಲ ಮಾಧ್ಯಮಗಳಲ್ಲಿ ಈಗಾಗಲೇ ಸುದ್ದಿ ಬಿತ್ತರವಾಗಿದ್ದರಿಂದ ಈ ವಿಚಾರವನ್ನು ಈಗ ಬಹಿರಂಗಪಡಿಸುತ್ತಿದ್ದೇನೆ. ಆಗಸ್ಟ್‌ 20 ರಂದು ‘ನಿಕಾ’ ನಡೆಯಲಿದೆ. ವಿವಾಹದ ನಂತರ ನಾವು ನನ್ನ ತವರೂರು ಗುಜ್ರಾನ್‌ವಾಲಾದಲ್ಲಿ ನೆಲೆಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು