ಮುಂಬೈ: ಪ್ರಚಾರ ಜಾಹೀರಾತುವೊಂದರಲ್ಲಿ 'ದಿ ವಾಲ್' ಖ್ಯಾತಿಯ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೊಸ ಅವತಾರವನ್ನು ನೋಡಿರುವ ಕ್ರೀಡಾಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.

ಕೇವಲ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ರಾಹುಲ್ ದ್ರಾವಿಡ್ ಅವರ ಇಂತಹದೊಂದು ಮುಖವನ್ನು ಎಂದಿಗೂ ನೋಡಿಲ್ಲ ಎಂದಿದ್ದಾರೆ.

ಏನಿದು ವಿಷಯ?
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಆನ್‌ಲೈನ್ ಅಪ್ಲಿಕೇಷನ್ ಕ್ರೆಡ್ ಬಿಡುಗಡೆ ಮಾಡಿರುವ ಹೊಸ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್, ಕೋಪಗೊಳ್ಳುವ ಸನ್ನಿವೇಶವನ್ನುಬಹಿರಂಗಪಡಿಸಲಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುವ ರಾಹುಲ್ ದ್ರಾವಿಡ್, ವಿಭಿನ್ನ ಹಾವ-ಭಾವಗಳ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಇದನ್ನೂ ಓದಿ:ಆಳ–ಅಗಲ: ಕೋವಿಡ್ಗೆ ಕ್ರಿಕೆಟ್ ಸೆಡ್ಡು.. ಇಂದಿನಿಂದ ಚುಟುಕು ಕ್ರಿಕೆಟ್ ಹಬ್ಬ

ಕ್ರೆಡ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದರೆ ಕ್ಯಾಶ್‌ಬ್ಯಾಕ್ ಹಾಗೂ ರಿವಾರ್ಡ್ ಸಿಗಲಿದೆ. ಆದರೆ ಇದನ್ನು ಯಾರೂ ನಂಬುವುದಿಲ್ಲ. ರಾಹುಲ್ ದ್ರಾವಿಡ್ ಕೋಪಗೊಳ್ಳುತ್ತಾರೆ ಅಂದರೆ ಯಾರಾದರೂ ನಂಬುತ್ತಾರೆಯೇ? ಎಂಬುದಕ್ಕೆ ಸಮಾನವಾಗಿದೆ ಎಂದು ಆ್ಯಂಕರ್ ಬಿಂಬಿಸುತ್ತಾರೆ. ಈ ಜಾಹೀರಾತು ವಾಣಿಜ್ಯ ಉದ್ದೇಶವನ್ನು ಕುದುರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ತಮ್ಮ ಆಡುವ ಕಾಲಘಟ್ಟದಲ್ಲಿ ರಾಹುಲ್ ದ್ರಾವಿಡ್ ಎಂದಿಗೂ ಎಲ್ಲೆ ಮೀರಿದವರಲ್ಲ. ಎಂತಹ ಒತ್ತಡದ ಸನ್ನಿವೇಶವಿದ್ದರೂ ಬಹಳ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಉತ್ತಮ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಭಾರತದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ.

ಒಟ್ಟಿನಲ್ಲಿ ಸುದೀರ್ಘ ಸಮಯದ ಬಳಿಕ ರಾಹುಲ್ ದ್ರಾವಿಡ್ ಹೊಸ ಅವತಾರ ನೋಡಿರುವ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.