ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಮೂರು ಪಂದ್ಯಗಳಿಗೆ ವಿಲಿಯಮ್ಸನ್ ಅಲಭ್ಯ

ಎಡಗೈ ಹೆಬ್ಬೆರಳ ಮೂಳೆಗೆ ಪೆಟ್ಟು
Published 14 ಅಕ್ಟೋಬರ್ 2023, 13:52 IST
Last Updated 14 ಅಕ್ಟೋಬರ್ 2023, 13:52 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತದ ವಿರುದ್ದ ಪಂದ್ಯವೂ ಸೇರಿದಂತೆ ವಿಶ್ವಕಪ್‌ನಲ್ಲಿ ತಮ್ಮ ತಂಡದ ಮುಂದಿನ ಮೂರು ಪಂದ್ಯಗಳಿಗೆಅಲಭ್ಯರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ರನ್ ಓಡುವ ವೇಳೆ, ಫೀಲ್ಡರ್‌ ಥ್ರೊ ಮಾಡಿದ್ದ ಚೆಂಡು ಬಡಿದು ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು.

ಐಪಿಎಲ್‌ ವೇಳೆ ಬಲ ಮೊಣಕಾಲಿಗೆ ನೋವು ಅನುಭವಿಸಿ ಆರು ತಿಂಗಳ ನಂತರ ಕ್ರಿಕೆಟ್‌ಗೆ ಮರಳಿದ್ದ ವಿಲಿಯಮ್ಸನ್, ಪುನರಾಗಮನ ಪಂದ್ಯದಲ್ಲೇ 78 ರನ್ ಗಳಿಸಿದ್ದಾಗ ಆಕಸ್ಮಿಕವಾಗಿ ಈ ಘಟನೆ ನಡೆದಿತ್ತು.

ಅಫ್ಗಾನಿಸ್ತಾನ ವಿರುದ್ಧ ಇದೇ 18ರಂದು, ಭಾರತ ವಿರುದ್ಧ ಧರ್ಮಶಾಲಾದಲ್ಲಿ ಅ. 22ರಂದು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ಅ. 28ರಂದು ನಡೆಯುವ ಪಂದ್ಯಗಳನ್ನು ವಿಲಿಯಮ್ಸನ್ ಕಳೆದುಕೊಳ್ಳಲಿದ್ದಾರೆ.

‘ಚೆನ್ನೈ ಪಂದ್ಯದ ವೇಳೆ ರನ್ನಿಗೆ ಓಡುವಾಗ ಫೀಲ್ಡರ್‌ ಎಸೆದ ಥ್ರೊದಿಂದ ಅವರ ಕೈಗೆ ಆದ ಗಾಯದ ಎಕ್ಸ್‌ರೇ ವೇಳೆ ಅವರ ಎಡಗೈ ಹೆಬ್ಬೆರಳ ಮೂಳೆಗೆ ಪೆಟ್ಟಾಗಿರುವುದು ಖಚಿತವಾಗಿದೆ’ ಎಂದು ನ್ಯೂಜಿಲೆಂಡ್ ಕ್ರಿಕೆಟ್‌ ಹೇಳಿಕೆಯಲ್ಲಿ ತಿಳಿಸಿದೆ. ವಿಲಿಯಮ್ಸನ್‌ ಆರೈಕೆ ಆರಂಭವಾಗಿದೆ.

ಟಾಮ್‌ ಬ್ಲಂಡೆಲ್ ಅವರು ಬದಲಿಯಾಗಿ ಭಾರತಕ್ಕೆ ಪ್ರಯಾಣಿಸಲಿದ್ದಾರೆ. ಆದರೆ ಅವರು ಅಧಿಕೃತವಾಗಿ ತಂಡದ ಭಾಗವಾಗಿಲ್ಲ.

ವಿಲಿಯಮ್ಸನ್‌ ವಿಶ್ವಕಪ್‌ನಲ್ಲಿ ಕೊನೆಯ ಕೆಲವು ಲೀಗ್ ಪಂದ್ಯಗಳಿಗೆ ಲಭ್ಯರಾಗಬಹುದೆಂಬ ವಿಶ್ವಾಸವನ್ನು ತಂಡದ ಕೋಚ್‌ ಗ್ಯಾರಿ ಸ್ಟೀಡ್ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT