ಭಾನುವಾರ, ಜನವರಿ 26, 2020
29 °C

ಕ್ರಿಕೆಟ್‌: ಕರ್ನಾಟಕದ ವನಿತೆಯರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ಕರ್ನಾಟಕ ತಂಡದವರು ಪುದುಚೇರಿಯ ಸಿಯೆಚೆಮ್‌ ಮೈದಾನದಲ್ಲಿ ಭಾನುವಾರ ನಡೆದ ಬಿಸಿಸಿಐ ಮಹಿಳೆಯರ 23 ವರ್ಷದೊಳಗಿನ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೂಪರ್‌ ಲೀಗ್‌ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಹಿಮಾಚಲ ಪ್ರದೇಶ ಎದುರು ಸೋತಿದ್ದಾರೆ.

ಮೊದಲು ಬ್ಯಾಟ್‌ ಮಾಡಿದ ಸಿ.ಪ್ರತ್ಯೂಷಾ ಸಾರಥ್ಯದ ಕರ್ನಾಟಕ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 89ರನ್‌ ದಾಖಲಿಸಿತು. ಸುಲಭ ಗುರಿಯನ್ನು ಹಿಮಾಚಲ ಪ್ರದೇಶ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಕರ್ನಾಟಕದ ಪರ ಶುಭಾ ಸತೀಶ್‌ (27 ರನ್‌) ಗರಿಷ್ಠ ಸ್ಕೋರರ್‌ ಎನಿಸಿದರು. ಮೋನಿಕಾ ಸಿ.ಪಟೇಲ್‌ (28ಕ್ಕೆ3) ಉತ್ತಮ ಬೌಲಿಂಗ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 89 (ಶುಭಾ ಸತೀಶ್‌ 27; ಪ್ರೀತಿ ಗಗನ್‌ 15ಕ್ಕೆ2). ಹಿಮಾಚಲ ಪ್ರದೇಶ: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 93 (ಚಿತ್ರಾ ರವೀಂದರ್‌ ಸಿಂಗ್‌ 21, ಮೋನಿಕಾ ದೇವಿ 25; ಮೋನಿಕಾ ಸಿ.ಪಟೇಲ್‌ 28ಕ್ಕೆ3).

ಫಲಿತಾಂಶ: ಹಿಮಾಚಲ ಪ್ರದೇಶ ತಂಡಕ್ಕೆ 5 ವಿಕೆಟ್‌ ಗೆಲುವು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು